ನಮ್ಮ ಕನಸಿನಲ್ಲಿ ಬರುವ ಅನೇಕ ಸಂಗತಿಗಳು ಭವಿಷ್ಯದ ಘಟನೆಗಳ ಮುನ್ಸೂಚನೆಯಾಗಿರುತ್ತವೆ. ಒಮ್ಮೊಮ್ಮೆ ಕನಸಿನಲ್ಲಿ ಬೆಂಕಿ ಕೂಡ ಕಾಣಿಸಿಕೊಳ್ಳುತ್ತದೆ. ಕನಸಿನಲ್ಲಿ ಬೆಂಕಿ ಕಂಡರೆ ಶುಭ ಸಂಕೇತವೋ ಅಥವಾ ಅಶುಭವೋ ಎಂಬುದನ್ನು ತಿಳಿದುಕೊಳ್ಳೋಣ. ನಂಬಿಕೆಗಳ ಪ್ರಕಾರ ಕನಸಿನಲ್ಲಿ ಬೆಂಕಿಯನ್ನು ನೋಡುವುದು ಅಥವಾ ಏನಾದರೂ ಹೊತ್ತಿ ಉರಿದಂತೆ ಕಂಡರೆ ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಬೆಂಕಿಯ ಜ್ವಾಲೆಗಳು
ಕನಸಿನಲ್ಲಿ ಹೆಚ್ಚಿನ ಜ್ವಾಲೆಗಳನ್ನು ನೋಡುವುದು ಶುಭವಲ್ಲ. ಇದು ನಿಮ್ಮ ಜೀವನದಲ್ಲಿ ಏನಾದರೂ ಕೆಟ್ಟದು ಸಂಭವಿಸಲಿದೆ ಎಂಬುದರ ಮುನ್ಸೂಚನೆ. ಇದು ಕೆಲವು ಕೆಟ್ಟ ಸುದ್ದಿಗಳ ಸಂಕೇತವಾಗಿದೆ.
ಮೇಣದಬತ್ತಿ, ಧೂಪದ್ರವ್ಯ
ಕನಸಿನಲ್ಲಿ ಮೇಣದ ಬತ್ತಿ ಅಥವಾ ಹವನ ಕುಂಡವನ್ನು ನೋಡುವುದು ಮಂಗಳಕರವಾಗಿದೆ. ಇದು ಶಾಂತಿಯ ಸಂಕೇತವಾಗಿದೆ. ನಿಮ್ಮ ಕನಸಿನಲ್ಲಿ ಮೇಣದ ಬತ್ತಿ ಅಥವಾ ಹವನ ಕುಂಡ ಕಾಣಿಸಿಕೊಂಡಲ್ಲಿ ಮನಸ್ಸು ಶಾಂತವಾಗಿರುತ್ತದೆ. ಧಾರ್ಮಿಕ ಕೆಲಸಗಳಲ್ಲಿ ನೀವು ಸಮಯ ಕಳೆಯುತ್ತೀರಿ.
ಮನೆಗೆ ಬೆಂಕಿ
ಕನಸಿನಲ್ಲಿ ಮನೆ ಹೊತ್ತಿ ಉರಿಯುತ್ತಿರುವಂತೆ ಕಂಡರೆ ಅದು ನಿಮ್ಮ ಮಾನಸಿಕ ಒತ್ತಡವನ್ನು ಪ್ರತಿಬಿಂಬಿಸುತ್ತದೆ. ಇದರರ್ಥ ನೀವು ಕೆಲವು ಕೆಲಸದ ಬಗ್ಗೆ ಚಿಂತೆ ಮಾಡುತ್ತಿದ್ದೀರಿ, ಆದರೆ ಯಾವುದೇ ಪರಿಹಾರ ಲಭ್ಯವಿಲ್ಲ ಎಂದು. ಹೆಚ್ಚು ಚಿಂತಿಸದೇ ಮನಸ್ಸಿಗೆ ವಿಶ್ರಾಂತಿ ನೀಡಬೇಕು.
ನಮಗೇ ಬೆಂಕಿ ಬಿದ್ದಂತೆ ಕಾಣುವುದು
ಕನಸಿನಲ್ಲಿ ನಾವೇ ಸುಟ್ಟು ಹೋದಂತೆ ಕಾಣುವುದು ಶುಭ ಸಂಕೇತವೂ ಆಗಿರುತ್ತದೆ. ಕೆಲವೊಮ್ಮೆ ಇದು ನಿಮ್ಮ ಕಾಳಜಿಯನ್ನು ಮತ್ತು ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಕಾಡ್ಗಿಚ್ಚು
ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಕಾಡಿನ ಬೆಂಕಿಯನ್ನು ಅನೇಕ ಬಾರಿ ನೋಡುತ್ತಾನೆ. ಕಾಡಿನಲ್ಲಿ ಬೆಂಕಿಯನ್ನು ನೋಡುವುದು ಕುಟುಂಬದಲ್ಲಿನ ಸಮಸ್ಯೆಗಳ ಸಂಕೇತವಾಗಿದೆ.
ಕಚೇರಿ ಅಥವಾ ಅಂಗಡಿಯಲ್ಲಿ ಬೆಂಕಿ
ನಿಮ್ಮ ಕಚೇರಿ ಅಥವಾ ಅಂಗಡಿಗೆ ಬೆಂಕಿ ಬಿದ್ದಂತೆ ಕನಸು ಕಂಡರೆ ಅದು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಚೇರಿಯಲ್ಲಿ ಬೆಂಕಿ ನಿಮ್ಮ ಯಶಸ್ಸನ್ನು ಸೂಚಿಸುತ್ತದೆ. ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಂತೆ ಕನಸು ಬಿದ್ದರೆ ಲಾಭವಾಗುತ್ತದೆ.