ನವದೆಹಲಿ: ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪು ಹಮಾಸ್ ನಿಂದ ಇಸ್ರೇಲ್ ಜನರ ಮೇಲಿನ ಕ್ರೂರ ದಾಳಿಯನ್ನು ಖಂಡಿಸಿದ ಒಂದು ದಿನದ ನಂತರ, ಪ್ಯಾಲೆಸ್ಟೀನಿಯನ್ನರನ್ನು ಬೆಂಬಲಿಸಲು ಕಾಂಗ್ರೆಸ್ ತೀರ್ಮಾನ ಕೈಗೊಂಡಿದೆ.
ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಸಭೆಯಲ್ಲಿ ಪ್ಯಾಲೆಸ್ತೀನ್-ಇಸ್ರೇಲ್ ಸಂಘರ್ಷದ ಬಗ್ಗೆ ದುಃಖ ವ್ಯಕ್ತಪಡಿಸಿ ಕದನ ವಿರಾಮಕ್ಕೆ ಒತ್ತಾಯಿಸಿದ ನಿರ್ಣಯ ಅಂಗೀಕರಿಸಲಾಯಿತು. ಸಿಡಬ್ಲ್ಯೂಸಿಯ 7 ಅಂಶಗಳ ನಿರ್ಣಯದ ಕೊನೆಯ ಅಂಶವು ಪ್ಯಾಲೇಸ್ಟಿನಿಯನ್ ಜನರ ಹಕ್ಕುಗಳನ್ನು ಬೆಂಬಲಿಸುತ್ತದೆ.
ಕಾಂಗ್ರೆಸ್ ಅಂಗೀಕರಿಸಿದ ನಿರ್ಣಯದ 7 ನೇ ಅಂಶವು ಹೀಗೆ ಹೇಳುತ್ತದೆ, ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದ ಯುದ್ಧ ಮತ್ತು ಸಾವಿರಕ್ಕೂ ಹೆಚ್ಚು ಜನರ ನಷ್ಟದ ಬಗ್ಗೆ CWC ತನ್ನ ಆಳವಾದ ದುಃಖ ವ್ಯಕ್ತಪಡಿಸುತ್ತದೆ. ಪ್ಯಾಲೇಸ್ತೀನ್ ಜನರ ಭೂಮಿ, ಸ್ವ-ಆಡಳಿತ ಮತ್ತು ಸ್ವಾಭಿಮಾನ ಮತ್ತು ಘನತೆಯಿಂದ ಬದುಕುವ ಹಕ್ಕುಗಳಿಗಾಗಿ ತನ್ನ ದೀರ್ಘಾವಧಿಯ ಬೆಂಬಲವನ್ನು CWC ಪುನರುಚ್ಚರಿಸುತ್ತದೆ. ಸಿಡಬ್ಲ್ಯೂಸಿ ತಕ್ಷಣದ ಕದನ ವಿರಾಮ ಮತ್ತು ಪ್ರಸ್ತುತ ಸಂಘರ್ಷಕ್ಕೆ ಕಾರಣವಾಗುವ ಅನಿವಾರ್ಯ ಸಮಸ್ಯೆಗಳು ಸೇರಿದಂತೆ ಎಲ್ಲಾ ಬಾಕಿ ಉಳಿದಿರುವ ವಿಷಯಗಳ ಕುರಿತು ಮಾತುಕತೆಗಳನ್ನು ಪುನರಾರಂಭಿಸಲು ಕರೆ ನೀಡುತ್ತದೆ ಎಂದು ಹೇಳಲಾಗಿದೆ.
ಅಕ್ಟೋಬರ್ 7, 2023 ರಿಂದ ಹಮಾಸ್ ಮತ್ತು ಇಸ್ರೇಲಿ ರಕ್ಷಣಾ ಪಡೆಗಳ ನಡುವಿನ ಹೋರಾಟದಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದ್ದಾರೆ. ಈ ವಿಷಯದಲ್ಲಿ, ಕಾಂಗ್ರೆಸ್ ಪಕ್ಷದ ಅಧಿಕೃತ ಹೇಳಿಕೆಯು ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ನಡುವಿನ ಸಂಘರ್ಷವನ್ನು ಪರಿಹರಿಸಲು “ಮಾತುಕತೆ ಮತ್ತು ರಾಜಿ” ಪ್ರಕ್ರಿಯೆಗೆ ಒತ್ತು ನೀಡಿದೆ.
ಹಿಂದಿನ, ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಪೋಸ್ಟ್ ನಲ್ಲಿ ಮತ್ತು ಇಸ್ರೇಲಿ ಜನರ ಕಾನೂನುಬದ್ಧ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ಖಾತ್ರಿಪಡಿಸಿಕೊಳ್ಳುವಾಗ ಸಂಧಾನ ಪ್ರಕ್ರಿಯೆಯ ಮೂಲಕ ಸಾಧಿಸಬೇಕು. ಯಾವುದೇ ರೀತಿಯ ಹಿಂಸಾಚಾರವು ಎಂದಿಗೂ ಪರಿಹಾರವನ್ನು ನೀಡುವುದಿಲ್ಲ ಮತ್ತು ಅದು ನಿಲ್ಲಬೇಕು ಎಂದಿತ್ತು.
ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸುತ್ತಿದೆ ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡುತ್ತಿದೆ ಎಂಬುದು ಗಮನಾರ್ಹ. ಇಸ್ರೇಲಿ ಭದ್ರತಾ ಪಡೆಗಳು ಟ್ವಿಟರ್‌ನಲ್ಲಿ ನೀಡಿದ ಮಾಹಿತಿಯ ಪ್ರಕಾರ ಇದುವರೆಗೆ 653 ಗುರಿಗಳ ಮೇಲೆ ದಾಳಿ ಮಾಡಿದೆ. ಇಸ್ರೇಲ್ ಗಾಜಾಕ್ಕೆ ವಿದ್ಯುತ್ ಮತ್ತು ನೀರಿನ ಪೂರೈಕೆಯನ್ನು ಕೂಡ ಕಡಿತಗೊಳಿಸಿದೆ.
ಹಮಾಸ್ ಹೋರಾಟಗಾರರನ್ನು ಹೊರಹಾಕುವ ಹೋರಾಟದ ಮೂರನೇ ದಿನದಂದು ಇಸ್ರೇಲಿ ಸೈನ್ಯವು ಗಾಜಾ ಪಟ್ಟಿಯ ಸಮೀಪವಿರುವ ದಕ್ಷಿಣ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದೆ ಎಂದು ಸೋಮವಾರ ಘೋಷಿಸಿದೆ.