alex Certify ಗಣೇಶ ಚತುರ್ಥಿ ಸೆ.18 ಕ್ಕೋ ಅಥವಾ 19 ಕ್ಕೋ….? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣೇಶ ಚತುರ್ಥಿ ಸೆ.18 ಕ್ಕೋ ಅಥವಾ 19 ಕ್ಕೋ….? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ

ಭಾರತದಾದ್ಯಂತ ಇರುವ ಹಿಂದುಗಳು ಬಹಳ ಸಡಗರ ಮತ್ತು ಅದ್ದೂರಿಯಾಗಿ ಆಚರಿಸಲ್ಪಡುವ ಮಹತ್ವದ ಹಬ್ಬ ಗಣೇಶ ಚತುರ್ಥಿ. ಈ ಹಬ್ಬ ಶಿವ ಮತ್ತು ಪಾರ್ವತಿ ದೇವಿಯ ಮಗನಾದ ಗಣೇಶನ ಜನ್ಮದಿನವಾಗಿ ಆಚರಿಸಲಾಗುತ್ತೆ. ಭಾರತದಲ್ಲಿ ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಗೋವಾ ರಾಜ್ಯಗಳಲ್ಲಿ ಹೆಚ್ಚಿನ ಜನ ಆಚರಿಸುತ್ತಾರೆ.

ಜೇಡಿಮಣ್ಣಿನ್ನು ಬಳಸಿಕೊಂಡು ಗಣೇಶ ವಿಗ್ರಹಗಳನ್ನು ನಿರ್ಮಾಣ ಮಾಡಲಾಗುತ್ತೆ. ಜನ ಖಾಸಗಿಯಾಗಿ ತಮ್ಮ ತಮ್ಮ ಮನೆಗಳಲ್ಲಿ ಗಣೇಶನನ್ನು ಇರಿಸಿ ಪೂಜೆ ಮಾಡುವುದರ ಜೊತೆ ಜೊತೆಗೆ ಸಾರ್ವಜನಿಕವಾಗಿ ಪೆಂಡಾಲ್‌ಗಳನ್ನು ಹಾಕಿ ಅದರಡಿ ಗಣಪನನ್ನು ಕೂರಿಸಿ ಆರಾಧಿಸಲಾಗುತ್ತೆ. ಗಣೇಶನ ನೆಚ್ಚಿನ ಸಿಹಿತಿಂಡಿಗಳಾದ ಮೋದಕದಂತಹ ಭಕ್ಷ್ಯಗಳನ್ನು ಅರ್ಪಿಸಿ ವಿವಿಧ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತೆ. ಹತ್ತನೇ ದಿನದಂದು ಮೂರ್ತಿಯನ್ನು ಬೀದಿಗಳಲ್ಲಿ ಮೆರವಣಿಗೆ ಮಾಡಿ ಜಲಸ್ಥಂಬನ ಮಾಡುವ ಮೂಲಕ ಉತ್ಸವ ಕೊನೆಗೊಳ್ಳುತ್ತದೆ.

ನೂತನ ಕೆಲಸವನ್ನು ಆರಂಭ ಮಾಡುವ ಮೊದಲು ಯಾವುದೇ ಅಡೆತಡೆಗಳು ಬಾರದಂತೆ ಇದರ ಜೊತೆ ಸದ್ಭುದ್ಧಿಯನ್ನು ಕೊಡು ಎಂದು ಗಣಪನನ್ನು ಪೂಜಿಸಲಾಗುತ್ತದೆ. ಈ ಗಣಪನ ಉತ್ಸವ ಹತ್ತಿರವಾಗುತ್ತಿದಂತೆ ಹಬ್ಬ ಪ್ರಾರಂಭವಾಗುವ ಸರಿಯಾದ ದಿನಾಂಕದ ಬಗ್ಗೆ ಗೊಂದಲ ಹಲವರನ್ನು ಕಾಡುತ್ತೆ. ಹೆಚ್ಚಿನ ಜನರು ಸೆಪ್ಟೆಂಬರ್ 18 ಅಥವಾ 19 ರಂದು ಪ್ರಾರಂಭವಾಗುತ್ತದೆಯೇ ಎಂದು ಗೊಂದಲದಲ್ಲಿದ್ದಾರೆ. ಇದಕ್ಕೆ ಉತ್ತರ ನಾವು ಹೇಳ್ತೆವೆ.

ಗಣೇಶ ಚತುರ್ಥಿ ಸಾಮಾನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಭಾದ್ರಪದ ಶುಕ್ಲ ಪಕ್ಷದ ದಿನದಂದು ನಡೆಯುತ್ತದೆ. ಅಂದ್ರೆ ಈ ಬಾರಿ ಮಂಗಳವಾರ, ಸೆಪ್ಟೆಂಬರ್ 19, 2023ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಸೆಪ್ಟೆಂಬರ್ 28, 2023 ಹತ್ತನೇ ದಿನವಾದ ಗುರುವಾರದಂದು ಗಣೇಶ ವಿಸರ್ಜನೆ ನಡೆಯುತ್ತದೆ. ದೃಕ್ ಪಂಚಾಂಗದ ಪ್ರಕಾರ ಚತುರ್ಥಿ ತಿಥಿಯಂದು ಗಣೇಶನನ್ನು ಮನೆಗೆ ತರುವ ಮಂಗಳಕರ ಸಮಯ ಸೆಪ್ಟೆಂಬರ್ 18, 2023 ರಂದು ಮಧ್ಯಾಹ್ನ 12:39 ಕ್ಕೆ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 19, 2023 ರಂದು ಮಧ್ಯಾಹ್ನ 01:43 ಕ್ಕೆ ಕೊನೆಗೊಳ್ಳುತ್ತದೆ. ಸೆಪ್ಟೆಂಬರ್ 28 ರಂದು ಗಣೇಶ ವಿಸರ್ಜನೆಯೊಂದಿಗೆ ಹತ್ತು ದಿನಗಳ ಗಣೇಶ ಉತ್ಸವವು ಮುಕ್ತಾಯವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...