ಲೈಂಗಿಕ ಸಂಬಂಧ, ದಾಂಪತ್ಯವನ್ನು ಗಟ್ಟಿಗೊಳಿಸುತ್ತದೆ. ಲೈಂಗಿಕ ಸಂಬಂಧ ಹಾಗೂ ಲೈಂಗಿಕ ಆರೋಗ್ಯದ ಬಗ್ಗೆ ಅನೇಕರು ಈಗ್ಲೂ ನೇರವಾಗಿ ಮಾತನಾಡುವುದಿಲ್ಲ. ಅನೇಕರಿಗೆ ಇದ್ರ ಬಗ್ಗೆ ತಿಳಿದಿಲ್ಲ. ಬುದ್ದಿವಂತ ಮಹಿಳೆಯರು ಲೈಂಗಿಕ ಸಂಬಂಧದ ನಂತ್ರ ಕೆಲ ಕೆಲಸವನ್ನು ಅಗತ್ಯವಾಗಿ ಮಾಡುತ್ತಾರೆ. ಇದು ಅವ್ರ ಲೈಂಗಿಕ ಆರೋಗ್ಯ ಸುಧಾರಿಸುತ್ತದೆ.
ಸಂಭೋಗದ ನಂತರ ಮೂತ್ರ ವಿಸರ್ಜನೆ : ಲೈಂಗಿಕ ಆರೋಗ್ಯ ಬಹಳ ಮುಖ್ಯ. ಬುದ್ದಿವಂತ ಮಹಿಳೆಯರು ಲೈಂಗಿಕ ಸಂಬಂಧದದ ನಂತ್ರ ಮೂತ್ರ ವಿಸರ್ಜನೆ ಮಾಡ್ತಾರೆ. ಲೈಂಗಿಕ ಸಂಬಂಧದ ನಂತ್ರ ಮೂತ್ರ ವಿಸರ್ಜನೆ ಮಾಡುವುದು ಬಹಳ ಮುಖ್ಯ. ಲೈಂಗಿಕ ಸೋಂಕಿನ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವನ್ನು ಹೊರ ಹಾಕುತ್ತದೆ.
ಸಂಭೋಗದ ನಂತರ ಬಿಸಿ ನೀರಿದ ಸ್ನಾನ : ಸಂಭೋಗದ ನಂತರ ಮಹಿಳೆಯರಿಗೆ ಜನನಾಂಗದಲ್ಲಿ ಊತ, ಉರಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಹಾಗೂ ಸೋಂಕಿನ ಅಪಾಯ ಕಡಿಮೆ ಮಾಡಲು, ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು .ಜನನಾಂಗದ ಸುತ್ತಲಿರುವ ಚರ್ಮವನ್ನು ಉಗುರುಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಬೇಕು. ಜನನಾಂಗಕ್ಕೆ ನೀರು ಪ್ರವೇಶಿಸದಂತೆ ನೋಡಿಕೊಳ್ಳಬೇಕು.
ನೀರು ಸೇವನೆ : ಸಂಭೋಗದ ನಂತರ ಅನೇಕ ಮಹಿಳೆಯರು ನೀರು ಸೇವನೆ ಮಾಡ್ತಾರೆ. ಲೈಂಗಿಕ ಕ್ರಿಯೆ ಒಂದು ರೀತಿಯ ವ್ಯಾಯಾಮ. ಇದ್ರಿಂದ ದೇಹ ನಿರ್ಜಲೀಕರಣಗೊಳ್ಳುತ್ತದೆ. ಸಂಭೋಗದ ನಂತರ ನೀರು ಕುಡಿಯುವುದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಮೂತ್ರ ವಿಸರ್ಜನೆಗೂ ಸಹಾಯ ಮಾಡುತ್ತದೆ.
ಮೊಸರು ಮತ್ತು ಪ್ರೋಬಯಾಟಿಕ್ ಆಹಾರ ಸೇವನೆ : ಲೈಂಗಿಕ ಕ್ರಿಯೆ ನಂತ್ರ ಮಹಿಳೆಯರು ಮೊಸರು, ಮೊಸರಿನಂತಹ ಪ್ರೋಬಯಾಟಿಕ್ ಆಹಾರವನ್ನು ಸೇವಿಸಬೇಕು. ಇದು ಸ್ತ್ರೀ ಜನನಾಂಗಗಳಿಗೆ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಇದರೊಂದಿಗೆ ಯೀಸ್ಟ್ ಸೋಂಕಿನ ಅಪಾಯ ಕಡಿಮೆಯಾಗುತ್ತದೆ.
ಈ ವಸ್ತುಗಳಿಂದ ದೂರವಿರಿ : ಲೈಂಗಿಕ ಕ್ರಿಯೆಯ ನಂತರ ಗಟ್ಟಿಯಾದ ಬಟ್ಟೆಗಳು ಮತ್ತು ಸೋಪನ್ನು ಜನನಾಂಗಕ್ಕೆ ತಾಗಿಸಬಾರದು. ಇದ್ರಿ ದದ್ದುಗಳು, ತುರಿಕೆ ಮತ್ತು ಸೋಂಕಿನ ಅಪಾಯ ಹೆಚ್ಚಾಗುತ್ತದೆ.