’ಶೋ ಮೀ ದಿ ಥುಮ್ಕಾ’ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಇಂಡೋನೇಷ್ಯನ್ ನೃತ್ಯ ತಂಡ

ರಣಬೀರ್‌ ಕಪೂರ್‌ ಹಾಗೂ ಶ್ರದ್ಧಾ ಕಪೂರ್‌ರ ಇತ್ತೀಚಿನ ರೊಮ್ಯಾಂಟಿಕ್ ಕಾಮಿಡಿ, ’ತೂ ಝೂಟಿ ಮೇಯ್ನ್‌ ಮಕ್ಕರ್‌’ ಚಿತ್ರದ “ಶೂ ಮೀ ದಿ ಥುಮ್ಕಾ’ ಹಾಡಿನ ನೃತ್ಯ ಕಂಟೆಂಟ್ ಸೃಷ್ಟಿಕರ್ತರಿಗೆ ಭಾರೀ ಇಷ್ಟವಾಗಿದೆ.

ಇಂಡೋನೇಷ್ಯಾದ ನೃತ್ಯ ಸಮೂಹವೊಂದು ಇಡೀ ಹಾಡಿನ ನೃತ್ಯವನ್ನು ಮರುಸೃಷ್ಟಿಸಿದೆ. ಸುನಿಧಿ ಚೌಹಾಣ್ ಹಾಗೂ ಶಾಶ್ವತ್‌ ಸಿಂಗ್ ಹಾಡಿರುವ ಈ ಹಾಡಿಗೆ ಅಮಿತಾಭ್ ಭಟ್ಟಾಚಾರ್ಯ ಮಧುರವಾದ ಲಿರಿಕ್ಸ್ ಬರೆದಿದ್ದಾರೆ.

ವಿನಾ ಫ್ಯಾನ್ ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಶೇರ್‌ ಮಾಡಲಾಗಿರುವ ಈ ವಿಡಿಯೋಗೆ, “ಶೋ ಮೀ ದಿ ತುಮ್ಕಾ – ವಿಯಾನ್ ಫ್ಯಾನ್‌ ಅವತರಣಿಕೆಯ ನೃತ್ಯ – ಇಂಡೋನೇಷ್ಯನ್ – ರಣಬೀರ್‌ ಕಪೂರ್‌, ಶ್ರದ್ಧಾ ಕಪೂರ್‌,” ಎಂದು ಕ್ಯಾಪ್ಷನ್ ಬರೆಯಲಾಗಿದೆ.

ವಿನಾ ಫ್ಯಾನ್‌ ಚಾನೆಲ್ ತನ್ನ ಬಯೋದಲ್ಲಿ ತನ್ನನ್ನು ತಾನು ಇಂಡೋನೇಷ್ಯಾದ ಬಾಲಿವುಡ್ ಐಕಾನ್, ಇನ್‌ಫ್ಲುಯೆನ್ಸರ್‌, ಮಾಡೆಲ್, ಆರ್ಟಿಸ್ಟ್‌, ಕಂಟೆಂಟ್ ಸೃಷ್ಟಿಕರ್ತ ಎಂದೆಲ್ಲಾ ಹೇಳಿಕೊಂಡಿದೆ. ಯೂಟ್ಯೂಬ್‌ನಲ್ಲಿ 1.8 ದಶಲಕ್ಷ ಚಂದಾದಾರನ್ನು ವಿಯಾ ಫ್ಯಾನ್ ಚಾನೆಲ್ ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read