ಪ್ರಧಾನಿ ಮೋದಿ ಅಧಿಕಾರಾವಧಿಯಲ್ಲಿ ಭಾರತೀಯ ರೈಲ್ವೆ ಇಲಾಖೆ ಬಹುತೇಕ ಡಿಜಟಲೀಕರಣಗೊಂಡಿದೆ ಹಾಗೂ ರೈಲುಗಳ ಸುರಕ್ಷತೆ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಇದರ ಭಾಗವಾಗಿ ಭಾರತೀಯ ರೈಲ್ವೆ ಇಲಾಖೆಯು ʼಕವಚ್ʼ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದು ಹೈಸ್ಪೀಡ್ ರೈಲುಗಳು ಹಳಿ ತಪ್ಪಿ ಅಥವಾ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆಯುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಆದರೆ ಈ ಸುಧಾರಿತ ತಂತ್ರಜ್ಞಾನಗಳು ಸಮರ್ಥವಾಗಿ ಕಾರ್ಯನಿರ್ವಹಸಬೇಕು ಎಂದರೆ ವಿಶ್ವಾಸಾರ್ಹ ನೆಟ್ವರ್ಕ್ಗಳ ಅಗತ್ಯವಿರುತ್ತದೆ. ಭಾರತೀಯ ರೈಲ್ವೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಶೋಧನಾ ವಿನ್ಯಾಸ ಹಾಗೂ ಗುಣಮಟ್ಟ ಸಂಸ್ಥೆಯು ಸಿಗ್ನಲಿಂಗ್ ಪರಿಣಾಮಗಳನ್ನು ಕಡಿಮೆ ಮಾಡಲು ಹಾಗೂ ಎಲ್ಲಾ ರೀತಿಯಲ್ಲಿ ರೈಲುಗಳನ್ನು ರಕ್ಷಿಸಲು ನೆಟ್ವರ್ಕ್ ಆಪ್ಟಿಮೈಸ್ ಮಾಡಿದೆ.
ವಂದೇ ಭಾರತ್ ರೈಲುಗಳು ಸೇರಿದಂತೆ ದೇಶದ ಪ್ರಮುಖ ರೈಲ್ವೆ ಜಾಲಗಳಿಗೆ ಹಂತ ಹಂತವಾಗಿ ನೀಡಲಾಗುತ್ತಿರುವ ಕವಚ್ ವ್ಯವಸ್ಥೆಯ ಬಗ್ಗೆ ನಿಖರವಾದ ಮಾಹಿತಿ ತಿಳಿದುಕೊಳ್ಳಲು ನೀವು ಈ ಕೆಳಗಿನ ವಿಡಿಯೋವನ್ನು ನೋಡಬಹುದಾಗಿದೆ.
ಕವಚ್ ವ್ಯವಸ್ಥೆಯು ಸುರಕ್ಷಿತವಾಗಿ ರೈಲುಗಳು ಅತೀ ಹೆಚ್ಚಿನ ವೇಗದಲ್ಲಿ ಓಡಲು ಸಹಕಾರಿಯಾಗಿದೆ.. ಇದನ್ನು ದೇಶದ ಹೊಸ ಮತ್ತು ಹಳೆಯ ಜೆನ್ ರೈಲುಗಳೊಂದಿಗೆ ಸಂಯೋಜನೆ ಕೂಡ ಮಾಡಬಹುದಾಗಿದೆ. ಇದರಿಂದ ಕವಚ್ ವ್ಯವಸ್ಥೆಯನ್ನು ಅಳವಡಿಸಲು ಹಳೆಯ ರೈಲುಗಳನ್ನು ರೂಪಾಂತರಗೊಳಿಸಬೇಕಾ ಅನಿವಾರ್ಯತೆ ರೈಲ್ವೆ ಇಲಾಖೆಗೆ ಬರೋದಿಲ್ಲ. ಇದರಿಂದ ರೈಲ್ವೆ ಇಲಾಖೆ ಸಾಕಷ್ಟು ಹಣವನ್ನು ಉಳಿಸಬಹುದಾಗಿದೆ.