ನವದೆಹಲಿ: ಭಾರತೀಯ ವಾಯುಪಡೆಯಲ್ಲಿ 3500 ‘ಅಗ್ನಿವೀರ್ ವಾಯು’ ನೇಮಕಾತಿಗೆ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಕ್ಟೋಬರ್ 13 ರಿಂದ ಆಯ್ಕೆ ಪರೀಕ್ಷೆ ನಡೆಯಲಿದ್ದು, ಜುಲೈ 27ರಂದು ಆನ್ಲೈನ್ ನೋಂದಣಿ ಪ್ರಾರಂಭವಾಗುತ್ತದೆ. ಆಗಸ್ಟ್ 17 ನೋಂದಣಿಗೆ ಕೊನೆಯ ದಿನವಾಗಿದೆ.
ಅಭ್ಯರ್ಥಿಗಳು 2003ರ ಜೂನ್ 27 ಮತ್ತು 2006 ಡಿಸೆಂಬರ್ 27ರ ನಡುವೆ ಜನಿಸಿರಬೇಕು. ಆಯ್ಕೆ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ತೇರ್ಗಡೆಯಾದರೆ ದಾಖಲಾತಿಯ ದಿನಾಂಕದಂದು ಅವರ ಗರಿಷ್ಠ ವಯೋಮಿತಿ 21 ವರ್ಷ ದಾಟಿರಬಾರದು.
ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ನೋಂದಣಿಗೆ ಅರ್ಹರಾಗಿರುತ್ತಾರೆ. ನಾಲ್ಕು ವರ್ಷಗಳ ಎಂಗೇಜ್ಮೆಂಟ್ ಅವಧಿಯವರೆಗೆ ಮದುವೆಯಾಗದಿರಲು ಅಭ್ಯರ್ಥಿಗಳು ಬದ್ಧರಾಗಿರಬೇಕು. ಎಂಗೇಜ್ಮೆಂಟ್ ಅವಧಿಯು ತರಬೇತಿ, ಕೌಶಲ್ಯ ಅಭಿವೃದ್ಧಿ ಚಟುವಟಿಕೆ, ಪ್ರಾಯೋಗಿಕ ಮತ್ತು ರಚನಾತ್ಮಕ ಮೌಲ್ಯಮಾಪನ ಒಳಗೊಂಡಿರುತ್ತದೆ. https://www.indianairforce.cdac.in/ ವೆಬ್ ಸೈಟ್ ಗಮನಿಸಬಹುದು ಎಂದು ಹೇಳಲಾಗಿದೆ.