ನವದೆಹಲಿ: ದೇಶದಲ್ಲಿ ಉದ್ಯೋಗಾವಕಾಶಗಳ ಹೆಚ್ಚಳದಿಂದ ನಿರುದ್ಯೋಗ ದರ ಇಳಿಮುಖವಾಗಿದೆ. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರ ನಿರುದ್ಯೋಗ ದರ 2023ರಲ್ಲಿ ಶೇ. 3.1ಕ್ಕೆ ಇಳಿಕೆಯಾಗಿದೆ. ಇದು ಕಳೆದ ಮೂರು ವರ್ಷಗಳಲ್ಲಿಯೇ ಅತ್ಯಂತ ಕಡಿಮೆಯಾಗಿದೆ.
ಅಂಕಿ ಅಂಶ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ ಭಾರತದಲ್ಲಿ ನಿರುದ್ಯೋಗ ದರ ಶೇಕಡ 3.1ಕ್ಕೆ ಹೇಳಿಕೆಯಾಗಿದೆ ಎಂದು ತಿಳಿಸಿದೆ. 2023ರಲ್ಲಿ ದೇಶದ ನಿರುದ್ಯೋಗದ ಶೇಕಡ 3.1 ರಷ್ಟು ಇದೆ. 2022 ರಲ್ಲಿ ಶೇಕಡ 3.6 ರಷ್ಟು, 2021ರಲ್ಲಿ ಶೇಕಡ 4.2ರಷ್ಟು ನಿರುದ್ಯೋಗ ದರ ಇತ್ತು.
ಕೊರೋನಾ ನಂತರ ದೇಶದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಮಹಿಳೆಯರಲ್ಲಿ ನಿರುದ್ಯೋಗದ 2021 ರಲ್ಲಿ ಶೇಕಡ 3.4, 2022 ರಲ್ಲಿ ಶೇಕಡ 3.3, 2023ರಲ್ಲಿ ಶೇಕಡ 3ರಷ್ಟು ಇಳಿಕೆಯಾಗಿದೆ.
ಪುರುಷರಲ್ಲಿ ನಿರುದ್ಯೋಗ ದರ 2022 ರಲ್ಲಿ ಶೇಕಡ 3.7, 2021ರಲ್ಲಿ ಶೇಕಡ 4.5ರಷ್ಟು, 2023ರಲ್ಲಿ ಶೇಕಡ 3.2ಕ್ಕೆ ಇಳಿಕೆಯಾಗಿದೆ ಎಂದು ಹೇಳಲಾಗಿದೆ.