ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯನ ವಿಶಿಷ್ಟ ಗುರುತು. ದೇಶದ ನಾಗರೀಕರೆಲ್ಲ ಇದನ್ನು ಹೊಂದಿರಲೇಬೇಕು. ಆಧಾರ್ ಕಾರ್ಡ್ ಇದ್ದರೆ ಮಾತ್ರ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಬಹುದು. ಆದರೆ ಆಧಾರ್ ಕಾರ್ಡ್‌ನಲ್ಲಿ ನಮ್ಮ ಫೋಟೋ ತುಂಬಾ ಕೆಟ್ಟದಾಗಿ ಬರುತ್ತದೆ. ಇದರಿಂದಾಗಿ ಅನೇಕರು ಮುಜುಗರ ಅನುಭವಿಸುತ್ತಾರೆ. ಮನೆಯಲ್ಲೇ ಕುಳಿತು ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ನವೀಕರಿಸಬಹುದು.
ಆಧಾರ್ ಕಾರ್ಡ್ ಫೋಟೋ ನವೀಕರಿಸಲು ಈ ಹಂತಗಳನ್ನು ಅನುಸರಿಸಿ
– uidai.gov.in ಎಂಬ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://uidai.gov.in/.
– ‘ಅಪ್‌ಡೇಟ್ ಆಧಾರ್’ ಆಯ್ಕೆಯನ್ನು ಕ್ಲಿಕ್ ಮಾಡಿ.
– ಆಧಾರ್ ನೋಂದಣಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
– ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ಫಾರ್ಮ್ ಅನ್ನು ಸಲ್ಲಿಸಿ.
– ಪ್ರಸ್ತುತ ಆಧಾರ್ ಉದ್ಯೋಗಿ ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ.
– ಆಧಾರ್ ಕಾರ್ಡ್‌ನಲ್ಲಿ ಅಪ್‌ಡೇಟ್ ಆಗುವ ಹೊಸ ಛಾಯಾಚಿತ್ರದ ಮೇಲೆ ಕ್ಲಿಕ್ ಮಾಡುತ್ತಾರೆ.
– ಇದಕ್ಕಾಗಿ 100 ರೂಪಾಯಿ ಶುಲ್ಕ ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.
– ಈ ಕುರಿತ ಸ್ವೀಕೃತಿ ಸ್ಲಿಪ್ ಮತ್ತು ಅಪ್‌ಡೇಟ್ ವಿನಂತಿ ಸಂಖ್ಯೆ (URN)ಯನ್ನು ಪಡೆದುಕೊಳ್ಳಿ.
– ಫೋಟೋವನ್ನು 90 ದಿನಗಳಲ್ಲಿ ನವೀಕರಿಸಲಾಗುತ್ತದೆ.
ಆಧಾರ್ ಕಾರ್ಡ್ ಟ್ರ್ಯಾಕಿಂಗ್
ಈ ಹಂತಗಳನ್ನು ಅನುಸರಿಸಿದರೆ ಆಧಾರ್ ಕಾರ್ಡ್ ಅನ್ನು ಟ್ರ್ಯಾಕ್ ಮಾಡುವ ಆಯ್ಕೆ ಸಹ ದೊರೆಯುತ್ತದೆ. ಆಧಾರ್ ಕಾರ್ಡ್ ಯಾವಾಗ ಸಿದ್ಧವಾಗಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಟ್ರ್ಯಾಕಿಂಗ್ ಪ್ರಕ್ರಿಯೆಯು ಆನ್‌ಲೈನ್ ಆಗಿದೆ. UIDAI ನ ಅಧಿಕೃತ ವೆಬ್‌ಸೈಟ್‌ಗೆ ವಿಸಿಟ್ ಮಾಡಿ, ನಿಮಗೆ ನೀಡಿರುವ URN ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್ ಅನ್ನು ಟ್ರ್ಯಾಕ್ ಮಾಡಬಹುದು. ಹತ್ತಿರದ ಆಧಾರ್ ಕೇಂದ್ರಕ್ಕೆ ಹೋದಾಗ ಮಾತ್ರ ಫೋಟೋವನ್ನು ನವೀಕರಿಸುವ ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.