ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಪುತ್ರಿ 35 ವರ್ಷದ ಇಲ್ತಿಜಾ ಮುಫ್ತಿ ನ್ಯಾಷನಲ್ ಕಾನ್ಫರೆನ್ಸ್ ನ ಬಶೀರ್ ಅಹ್ಮದ್ ವೀರಿ ಅವರೊಂದಿಗೆ ನೇರ ಸ್ಪರ್ಧೆಯಲ್ಲಿ ತಮ್ಮ ಮೊದಲ ರಾಜಕೀಯ ಪರೀಕ್ಷೆಯನ್ನು ಎದುರಿಸಲಿದ್ದಾರೆ.
ಬಿಜ್‌ಭೇರಾವನ್ನು ಮುಫ್ತಿಗಳ ತವರು ಕಣವಾಗಿ ನೋಡಲಾಗುತ್ತದೆ ಮತ್ತು ಕಳೆದ 28 ವರ್ಷಗಳಿಂದ ಪಿಡಿಪಿ ಪಕ್ಷವು ಈ ಕ್ಷೇತ್ರವನ್ನು ಗೆಲ್ಲುತ್ತಿದೆ. ಮೆಹಬೂಬಾ ಮುಫ್ತಿ 1996 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ವಿಧಾನಸಭಾ ಕ್ಷೇತ್ರದಿಂದ ಗೆದ್ದರು. ಅವರ ತಂದೆ ಮತ್ತು ಇಲ್ತಿಜಾ ಅವರ ಅಜ್ಜ ಮುಫ್ತಿ ಮೊಹಮ್ಮದ್ ಸಯೀದ್ ಅವರು 1967 ರಲ್ಲಿ ಬಿಜ್‌ಬೆಹರಾದಿಂದ ಚುನಾವಣೆಯಲ್ಲಿ ಗೆದ್ದರು.
ಇದೇ ಭರವಸೆಯಲ್ಲಿ ಚುನಾವಣಾ ಪ್ರಚಾರಕ್ಕಿಳಿದಿರುವ ಇಲ್ತಿಜಾ ಮುಫ್ತಿ “ನಾನು ನಿಮ್ಮನ್ನು ಪ್ರತಿನಿಧಿಸಲು ಮತ್ತು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಇಲ್ಲಿದ್ದೇನೆ. ನೀವು ನನ್ನ ಅಜ್ಜ ಮತ್ತು ನನ್ನ ತಾಯಿಯನ್ನು ಬೆಂಬಲಿಸಿದ ರೀತಿಯಲ್ಲಿ ನೀವು ನನಗೆ ಅದೇ ಬೆಂಬಲವನ್ನು ತೋರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ” ಎಂದು ಭಾಷಣ ಮಾಡಿದ್ದಾರೆ.
ಯಾವರ್ ಶಾಫಿ ಬಂಡಾಯ್(38) PDP, ಶೋಪಿಯಾನ್
ಶೋಪಿಯಾನ್‌ನಿಂದ ಎರಡು ಬಾರಿ ಶಾಸಕರಾಗಿದ್ದ ಮೊಹಮ್ಮದ್ ಶಾಫಿ ಬಂಡಾಯ್ ಅವರ ಮೊಮ್ಮಗ ಯಾವರ್ ಶಾಫಿ ಬಂಡಾಯ್ ಮೂರು ವರ್ಷಗಳ ಹಿಂದೆ ಪಿಡಿಪಿ ಸೇರಿದ್ದರು. “ಹೆಚ್ಚಿನ ನಾಯಕರು ಪಕ್ಷವನ್ನು ತೊರೆಯುತ್ತಿರುವಾಗ, ನಾನು ಈ ಸಂಘಟನೆಯ ಭಾಗವಾಗಲು ನಿರ್ಧರಿಸಿದೆ ಮತ್ತು ಶೋಪಿಯಾನ್‌ನಿಂದ ಸ್ಪರ್ಧಿಸಲು ಜನಾದೇಶ ಸಿಕ್ಕಿತು” ಎಂದು ಅವರು ಹೇಳಿದ್ದಾರೆ.
ಮೊಹಮ್ಮದ್ ರಫೀಕ್ ನಾಯಕ್, ಪಿಡಿಪಿ, ಟ್ರಾಲ್
ಮೊಹಮ್ಮದ್ ರಫೀಕ್ ನಾಯಕ್, ಮಾಜಿ ಸಚಿವ ಮತ್ತು ಜೆ & ಕೆ ವಿಧಾನಸಭೆಯ ಮಾಜಿ ಸ್ಪೀಕರ್ ಅಲಿ ಮೊಹಮ್ಮದ್ ನಾಯಕ್ ಅವರ ಪುತ್ರ. ಇತ್ತೀಚೆಗೆ ಅವರು ಪಿಡಿಪಿಗೆ ಸೇರ್ಪಡೆಗೊಂಡರು. “ನಮ್ಮ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ನನ್ನ ಜನರನ್ನು ಪ್ರತಿನಿಧಿಸಲು ಮತ್ತು ಅವರ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಎತ್ತಿ ಹಿಡಿಯಲು ನಾನು ಇಲ್ಲಿದ್ದೇನೆ” ಎಂದು ನಾಯ್ಕ್ ನಾಮಪತ್ರ ಸಲ್ಲಿಸಿದ ಕೂಡಲೇ ಹೇಳಿದರು. ನಾಯಕ್ ಸರ್ಕಾರಿ ಉದ್ಯೋಗಿಯಾಗಿದ್ದು, ಈ ವರ್ಷ ನಿವೃತ್ತರಾಗಿದ್ದರು.
ಇರ್ಷಾದ್ ರಸೂಲ್ ಕರ್ (56) NC, ಸೋಪೋರ್
ಇರ್ಷಾದ್ ರಸೂಲ್ ಕರ್ ಮಾಜಿ ಸಂಸದ ಗುಲಾಮ್ ರಸೂಲ್ ಕರ್ ಅವರ ಪುತ್ರ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಅವರು ಐದು ವರ್ಷಗಳ ಹಿಂದೆ ನ್ಯಾಷನಲ್ ಕಾನ್ಫರೆನ್ಸ್ ಸೇರಿದ್ದರು . ಇದೀಗ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ವಿಧಾನಸಭಾ ಸದಸ್ಯ ಹಾಜಿ ಅಬ್ದುಲ್ ರಶೀದ್ ಅವರೊಂದಿಗೆ ನೇರ ಹಣಾಹಣಿಯಲ್ಲಿದ್ದಾರೆ.
ಮಿಯಾನ್ ಮೆಹರ್ ಅಲಿ( 35) NC, ಕಂಗನ್
ಅಲಿ ಅವರು ಸಂಸದ ಮಿಯಾನ್ ಅಲ್ತಾಫ್ ಅಹ್ಮದ್ ಅವರ ಪುತ್ರ ಮತ್ತು ಕಂಗನ್ ನ ಪ್ರಬಲ ಧಾರ್ಮಿಕ ರಾಜಕೀಯ ಕುಟುಂಬದಿಂದ ಬಂದವರು. ಅವರ ತಂದೆ, ಅಜ್ಜ ಮತ್ತು ಮುತ್ತಜ್ಜ ಎಲ್ಲರೂ ರಾಜಕೀಯದಲ್ಲಿದ್ದಾರೆ ಮತ್ತು ಕಂಗನ್ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. “ನಾನು ರಾಜಕೀಯಕ್ಕೆ ಹೊಸಬನಲ್ಲ, ನಮ್ಮ ಕುಟುಂಬವು ತಲೆಮಾರುಗಳಿಂದ ರಾಜಕೀಯದಲ್ಲಿದೆ, ನಾನು ನನ್ನ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ ಆದರೆ ಈಗ ಜವಾಬ್ದಾರಿ ನನ್ನ ಮೇಲೆ ಹೆಚ್ಚಿರುತ್ತದೆ.” ಎಂದು ಹೇಳಿದ್ದಾರೆ.
ಸಲ್ಮಾನ್ ಸಾಗರ್(40) NC, ಹಜರತ್ಬಾಲ್, ಶ್ರೀನಗರ
ಸಾಗರ್ ಎನ್‌ಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಅಲಿ ಮೊಹಮ್ಮದ್ ಸಾಗರ್ ಅವರ ಪುತ್ರ. ಅವರು ಹಲವು ವರ್ಷಗಳ ಕಾಲ ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ (SMC) ಕಾರ್ಪೊರೇಟರ್ ಆಗಿದ್ದರು. ತಂದೆ ಮತ್ತು ಮಗ ಇಬ್ಬರಿಗೂ ಶ್ರೀನಗರ ನಗರದಿಂದ ಟಿಕೆಟ್ ನೀಡಲಾಗಿದೆ.
ಅಹ್ಸಾನ್ ಪರದೇಸಿ, NC, ಲಾಲ್ ಚೌಕ್, ಶ್ರೀನಗರ
ಮಾಜಿ ಶಾಸಕ ಗುಲಾಂ ಖಾದಿರ್ ಪರದೇಸಿ ಅವರ ಪುತ್ರ ಅಹ್ಸಾನ್ ಪರದೇಸಿ ಅವರು ಪ್ರತಿಷ್ಠಿತ ಲಾಲ್ ಚೌಕ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಅವರು ರಾಜಕೀಯವಾಗಿ ಸಕ್ರಿಯರಾಗಿದ್ದಾರೆ.
ತನ್ವಿರ್ ಸಾದಿಕ್, NC, ಝಾಡಿಬಾಲ್
ಸಾದಿಕ್ ಅವರು ಒಮರ್ ಅಬ್ದುಲ್ಲಾ ಅವರ ಸಲಹೆಗಾರರಾಗಿದ್ದ ಮಾಜಿ ಎನ್‌ಸಿ ಶಾಸಕ ಸಾದಿಕ್ ಅಲಿ ಅವರ ಮಗ. ಅವರು ಪ್ರಸ್ತುತ ಮುಖ್ಯ ವಕ್ತಾರರಾಗಿದ್ದಾರೆ ಮತ್ತು ಪಕ್ಷದ ಸಂವಹನದ ಉಸ್ತುವಾರಿ ವಹಿಸಿದ್ದಾರೆ. ಪಕ್ಷದ ಅಭಿಪ್ರಾಯಗಳನ್ನು ಎತ್ತಿ ಹಿಡಿಯುವ ಪ್ರಮುಖ ದೇಶೀಯ ಮತ್ತು ರಾಷ್ಟ್ರೀಯ ದಿನಪತ್ರಿಕೆಗಳಿಗೆ ಸಾದಿಕ್ ಬರೆಯುತ್ತಾರೆ. ಅವರು ಎರಡು ಬಾರಿ ಕಾರ್ಪೊರೇಟರ್ ಆಗಿದ್ದಾರೆ.
ಸಜ್ಜಾದ್ ಶಫಿ, 59, NC, ಉರಿ
ಶಫಿ ಅವರು ರಾಜ್ಯದ ಸಚಿವ ಮತ್ತು ಸಂಸದರಾಗಿ ಸೇವೆ ಸಲ್ಲಿಸಿದ್ದ ಅತ್ಯಂತ ಪ್ರಬಲ ರಾಜಕೀಯ ನಾಯಕರಲ್ಲಿ ಒಬ್ಬರಾದ ಮೊಹಮ್ಮದ್ ಶಫಿ ಅವರ ಪುತ್ರ. ವೃತ್ತಿಯಲ್ಲಿ ವೈದ್ಯರಾಗಿರುವ ಶಫಿ, ಕಳೆದ ಒಂದು ದಶಕದಿಂದ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ . ಪ್ರಸ್ತುತ ನ್ಯಾಷನಲ್ ಕಾನ್ಫರೆನ್ಸ್ ನ ಜಿಲ್ಲಾಧ್ಯಕ್ಷರಾಗಿರುವ ಶಫಿ ತಮ್ಮ ತಂದೆಯಿಂದ ರಾಜಕೀಯದ ಸೂಕ್ಷ್ಮಗಳನ್ನು ಕಲಿತು ಪಾಲಿಶ್ ರಾಜಕಾರಣಿಯಾಗಿದ್ದಾರೆ.
ಹಿಲಾಲ್ ಅಕ್ಬರ್ ಲೋನ್, NC, ಸೋನಾವರಿ
ವೃತ್ತಿಯಲ್ಲಿ ವಕೀಲರಾಗಿರುವ ಹಿಲಾಲ್ ಅಕ್ಬರ್ ಲೋನ್ ಅವರು ಸೋನಾವರಿ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಮಾಜಿ ಸಂಸದ, ಸಚಿವ ಮತ್ತು J&K ವಿಧಾನಸಭೆಯ ಮಾಜಿ ಸ್ಪೀಕರ್ ಅಕ್ಬರ್ ಲೋನ್ ಅವರ ಪುತ್ರ. ಹಿಲಾಲ್ ಅಕ್ಬರ್ ಲೋನ್ ಯುವ ವಕೀಲರಾಗಿದ್ದು ಒಂದು ದಶಕಕ್ಕೂ ಹೆಚ್ಚು ಕಾಲ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ಇದು ಅವರ ತಂದೆ ಈ ಹಿಂದೆ ಹಲವಾರು ಬಾರಿ ಪ್ರತಿನಿಧಿಸುವ ಕ್ಷೇತ್ರದಿಂದ ಅವರ ಮೊದಲ ರಾಜಕೀಯ ಹೋರಾಟವಾಗಿದೆ.