ನೂರ್ಕಾಲ ಆರೋಗ್ಯವಾಗಿ ಬದುಕಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತದೆ. ಆದರೆ ನಮ್ಮ ಇಂದಿನ ಜೀವನಶೈಲಿಯಲ್ಲಿ ಇದು ಅಸಾಧ್ಯ. ಅಮೆರಿಕದ ಅಮೆರಿಕದ ನೀಲಿ ವಲಯಗಳ ಜನರು ಪ್ರಪಂಚದಲ್ಲೇ ಅತಿ ಹೆಚ್ಚು ದೀರ್ಘಾಯುಷಿಗಳು. ಈ ಪ್ರದೇಶಗಳಲ್ಲಿ ವಾಸಿಸುವ ಜನರ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡರೆ ನಾವು ಸಹ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಬಹುದು.
ಅಮೆರಿಕದಲ್ಲಿ ಒಂದೇ ಒಂದು ನೀಲಿ ವಲಯವಿದೆ, ಅದೇ ಕ್ಯಾಲಿಫೋರ್ನಿಯಾದ ಲೋಮಾ ಲಿಂಡಾ. ಈ ಪ್ರದೇಶಗಳಲ್ಲಿ ವಾಸಿಸುವ ಜನರು 80 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ. ಇದಕ್ಕೆ ಕಾರಣ ಅವರ ಆರೋಗ್ಯಕರ ಆಹಾರ ಪದ್ಧತಿ. ಇವರು ಹೆಚ್ಚಾಗಿ ಸಸ್ಯ ಆಧಾರಿತ ಆಹಾರಗಳನ್ನು ಸೇವಿಸುತ್ತಾರೆ. ಅಲ್ಲಿನ ಪೌಷ್ಠಿಕ ತಜ್ಞರು ಆಯಸ್ಸು ಹೆಚ್ಚಿಸಬಲ್ಲ ಡಯಟ್ ಹೇಗಿರುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಬೆಳಗಿನ ಆಹಾರ
ಬೆಳಗ್ಗೆ 6 ಗಂಟೆಗೆ ನಿದ್ದೆಯಿಂದ ಎದ್ದ ನಂತರ ಸುಮಾರು 240 ಮಿಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಅದಕ್ಕೆ ಸ್ವಲ್ಪ ನಿಂಬೆ ರಸ ಕೂಡ ಸೇರಿಸಬಹುದು. ಒಂದು ಗಂಟೆಯ ನಂತರ 7 ಗಂಟೆಗೆ ಉಪಹಾರ. ಬೆಳಗಿನ ಉಪಾಹಾರದಲ್ಲಿ ಸಸ್ಯ ಮೂಲದ ಹಾಲಿನೊಂದಿಗೆ ಧಾನ್ಯಗಳು ಮತ್ತು ಹಣ್ಣುಗಳನ್ನು ಸೇವಿಸಬೇಕು.
ಸ್ನಾಕ್ಸ್
ಸುಮಾರು 10 ಗಂಟೆಗೆ ಲಘು ಉಪಹಾರ ತೆಗೆದುಕೊಳ್ಳಬಹುದು. ಹಣ್ಣುಗಳು, ಡ್ರೈಫ್ರೂಟ್ಸ್ ಮತ್ತು ನಟ್ಸ್ ಜೊತೆಗೆ ಗ್ರನೋಲಾ ಬಾರ್ ಅನ್ನು ತಿನ್ನಬಹುದು. ತುಂಬಾ ಹಸಿವಾಗದಿದ್ದರೆ ಚೀಸ್ ಸ್ಟಿಕ್, ಜ್ಯೂಸ್ ಅಥವಾ ಮೊಸರು ಸೇವಿಸಬಹುದು.
ಮಧ್ಯಾಹ್ನದ ಊಟ
ಮಧ್ಯಾಹ್ನ 12 ಗಂಟೆಗೆ ಊಟ ಮಾಡಬೇಕು. ಊಟದಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಕೊಬ್ಬು, ತರಕಾರಿ ಮತ್ತು ಕೆಲವು ಹಣ್ಣುಗಳಿರಬೇಕು. ಸಸ್ಯ ಆಧಾರಿತ ಪ್ರೋಟೀನ್ ಅನ್ನು ಇಲ್ಲಿನ ಜನರು ಸೇವಿಸುತ್ತಾರೆ. ತೋಫು, ಮಸೂರ ಬೇಳೆ, ಬೀನ್ಸ್ ಮತ್ತು ಸೋಯಾದಿಂದ ಮೀಟ್ ಸೇವನೆ ಮಾಡಲಾಗುತ್ತದೆ.
ಸಂಜೆ ತಿಂಡಿ
ಸುಮಾರು 1:30 ರಿಂದ 2:15ರ ಸಮಯದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಏನಾದರೂ ಸಿಹಿ ತಿನ್ನಬಹುದು. ಸಂಜೆಯ ತಿಂಡಿಗಾಗಿ ಚಿಕ್ಕ ಚಾಕೊಲೇಟ್, ಬಾಳೆಹಣ್ಣು ಅಥವಾ ಸ್ಟ್ರಾಬೆರಿ ಜೊತೆಗೆ ಪೀನಟ್ ಬಟರ್ ಮತ್ತು ನುಟೆಲ್ಲಾ ಸವಿಯಬಹುದು.
ರಾತ್ರಿ ಊಟ
ನೀಲಿ ವಲಯದ ನಿವಾಸಿಗಳು ಸಂಜೆ 5 ಗಂಟೆಗೆ ಊಟ ಮಾಡುತ್ತಾರೆ. ತರಕಾರಿ, ಪ್ರೋಟೀನ್ ಜೊತೆಗೆ ಬಿಳಿ ಅಥವಾ ಬ್ರೌನ್ ರೌಸ್ ಬೌಲ್ ಸಾಮಾನ್ಯ. ಬೊಕ್ ಚಾಯ್ ಇಲ್ಲಿನ ಜನರ ಫೇವರಿಟ್. ಬೆಳ್ಳುಳ್ಳಿ, ಆಲಿವ್ ಎಣ್ಣೆ ಮತ್ತು ಸಸ್ಯಾಹಾರಿ ಸಿಂಪಿ ಸಾಸ್‌ನೊಂದಿಗೆ ಇದನ್ನು ಮಾಡಲಾಗುತ್ತದೆ. ಡಿನ್ನರ್‌ನಲ್ಲಿ ಪ್ರೊಟೀನ್‌ಗಾಗಿ ತೋಫು ತಿನ್ನುತ್ತಾರೆ ಇಲ್ಲಿನ ಜನ. ಇದನ್ನು ಈರುಳ್ಳಿ ಮತ್ತು ಬೆಳ್ಳುಳ್ಳಿ ಪುಡಿ, ಮಶ್ರೂಮ್ ಮಸಾಲೆಗಳೊಂದಿಗೆ ಹುರಿಯಲಾಗುತ್ತದೆ.
ಮಲಗುವ ಮುನ್ನ ಉಪಹಾರ
ರಾತ್ರಿ 8 ಗಂಟೆಯ ಸುಮಾರಿಗೆ ಇನ್ನೊಂದು ಹೆಲ್ದಿ ಮೀಲ್ ತೆಗೆದುಕೊಳ್ಳಬಹುದು. ಮೊಸರನ್ನು ಜೇನುತುಪ್ಪದೊಂದಿಗೆ ತಿನ್ನಬಹುದು. ಆರೋಗ್ಯಕರ ಕೊಬ್ಬು, ಫೈಬರ್ ಮತ್ತು ಪ್ರೋಟೀನ್‌ಗಾಗಿ ಸೀಡ್ಸ್ ಸಹ ಇದರಲ್ಲಿ ಸೇರಿಸಬಹುದು. ಮೊಸರಿನಲ್ಲಿ ಇರುವ ಕ್ಯಾಲ್ಸಿಯಂ ಮತ್ತು ಬ್ಯಾಕ್ಟೀರಿಯಾಗಳು ಹೊಟ್ಟೆಗೆ ತುಂಬಾ ಪ್ರಯೋಜನಕಾರಿ.