ಟೊಮೆಟೊ ಮತ್ತು ಮುಳ್ಳುಸೌತೆ ಜೊತೆಯಾಗಿ ಬೆರೆಸಿ ಸಲಾಡ್ ತಯಾರಿಸುವುದು ಒಳ್ಳೆಯದಲ್ಲ ಎಂದಿದೆ ಇತ್ತೀಚಿನ ಸಂಶೋಧನೆ. ಏನಿದರ ಮರ್ಮ?
ಟೊಮೆಟೊ ಮತ್ತು ಸೌತೆಕಾಯಿ ಮಿಶ್ರಣ ನಿಮಗೆ ಇಷ್ಟವಿರಬಹುದು. ಆದರೆ ಇದರ ಸೇವನೆಯಿಂದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದಿದೆ ಅಧ್ಯಯನ.
ಟೊಮೆಟೊ ಮತ್ತು ಸೌತೆಕಾಯಿ ಜೊತೆಯಾಗಿ ಸೇವಿಸಿದರೆ ಗ್ಯಾಸ್, ಹೊಟ್ಟೆನೋವು, ಹೊಟ್ಟೆ ಉರಿ, ಸುಸ್ತು ಕಾಣಿಸಿಕೊಳ್ಳಬಹುದು. ಸೌತೆ ಹೊಟ್ಟೆಗೆ ಹಗುರವಾಗಿ ಬೇಗ ಜೀರ್ಣವಾದರೆ, ಟೊಮೆಟೊ ಮತ್ತು ಅದರ ಬೀಜ ಜೀರ್ಣಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಸೌತೆಯಲ್ಲಿ ಹಲವು ಪೌಷ್ಟಿಕಾಂಶಗಳಿದ್ದು ಇದು ದೇಹಕ್ಕೆ ವಿಟಮಿನ್ ಸಿ ಒದಗಿಸುತ್ತದೆ. ಇವೆರಡು ಎರಡು ವಿರುದ್ಧ ಸೂಚಿಯಲ್ಲಿ ಬರುವ ಆಹಾರವಾಗಿದೆ. ಟೊಮೆಟೊ ಜೊತೆ ಮೊಸರು ಸೇವಿಸುವುದೂ ಒಳ್ಳೆಯದಲ್ಲ ಎಂದಿದೆ ಈ ಅಧ್ಯಯನ.