ಕೇಸರಿ ವಿಶ್ವದ ಅತ್ಯಂತ ದುಬಾರಿ ಮತ್ತು ಜನಪ್ರಿಯ ಮಸಾಲೆಗಳಲ್ಲಿ ಒಂದಾಗಿದೆ. ಅವುಗಳನ್ನು ಕ್ರೋಕಸ್ ಸ್ಯಾಟಿವಸ್ ಹೆಸರಿನ ಹೂವಿನಿಂದ ಸಂಗ್ರಹಿಸಲಾಗುತ್ತದೆ. ಹಲವಾರು ಔಷಧೀಯ ಗುಣಗಳಿರುವ ಕಾರಣ, ಪ್ರತಿ ಮನೆಯಲ್ಲೂ ಕೇಸರಿ ಬಳಸಲಾಗುತ್ತದೆ. ಕೇಸರಿ ಚಹಾ ಕುಡಿಯುವುದು ನಮ್ಮ ದೇಹಕ್ಕೆ ಪ್ರಯೋಜನಕಾರಿ. ರಾತ್ರಿ ಮಲಗುವ ಮುನ್ನ ಕೇಸರಿ ಚಹಾವನ್ನು ಕುಡಿಯುವುದರಿಂದ ಅದರ ಲಾಭ ದುಪ್ಪಟ್ಟಾಗುತ್ತದೆ. ಇದಕ್ಕೆ ಅನೇಕ ಕಾರಣಗಳೂ ಇವೆ.
ಕೇಸರಿಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಕೆಲಸ ಮಾಡುತ್ತದೆ. ಕೇಸರಿಯಲ್ಲಿ ಸಫ್ರಾನಾಲ್‌ನಂತಹ ಸಂಯುಕ್ತಗಳು ಕಂಡುಬರುತ್ತವೆ. ಇದು ದೇಹದ ಮೇಲೆ ಶಾಂತ ಪರಿಣಾಮವನ್ನು ಬೀರುತ್ತದೆ. ಮಲಗುವ ಮೊದಲು ಕೇಸರಿ ಚಹಾವನ್ನು ಸೇವಿಸಿದರೆ ನಿಮ್ಮ ಮನಸ್ಸು ಮತ್ತು ದೇಹವು ಸಾಕಷ್ಟು ವಿಶ್ರಾಂತಿ ಪಡೆಯುತ್ತದೆ. ರಾತ್ರಿ ಚೆನ್ನಾಗಿ ನಿದ್ರಿಸಬಹುದು.
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಕೇಸರಿ ಸಹಾಯ ಮಾಡುತ್ತದೆ. ರಾತ್ರಿ ಕೇಸರಿ ಚಹಾವನ್ನು ತೆಗೆದುಕೊಳ್ಳುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಮತ್ತು ಯಾವುದೇ ರೀತಿಯ ಅಸ್ವಸ್ಥತೆಯಿಂದ ಪರಿಹಾರವನ್ನು ನೀಡುತ್ತದೆ. ಕ್ರೋಸೆಟಿನ್ ಮತ್ತು ಕ್ರೋಸಿನ್‌ನಂತಹ ಎಂಟಿಒಕ್ಸಿಡೆಂಟ್‌ಗಳು ಕೇಸರಿಯಲ್ಲಿ ಕಂಡುಬರುತ್ತವೆ.
ಇದು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಕೇಸರಿ ಚಹಾವನ್ನು ಕುಡಿಯುವುದು ಆತಂಕ, ಒತ್ತಡ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ಕೂಡ ನಿಮಗೆ ಪರಿಹಾರವನ್ನು ನೀಡುತ್ತದೆ.