alex Certify ಲ್ಯಾಪ್‌ಟಾಪ್ ಬಳಸುವಾಗ ಈ ತಪ್ಪು ಮಾಡಿದರೆ ನನಸಾಗುವುದಿಲ್ಲ ತಂದೆಯಾಗುವ ಕನಸು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲ್ಯಾಪ್‌ಟಾಪ್ ಬಳಸುವಾಗ ಈ ತಪ್ಪು ಮಾಡಿದರೆ ನನಸಾಗುವುದಿಲ್ಲ ತಂದೆಯಾಗುವ ಕನಸು…..!

ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಿಗಳವರೆಗೆ ಬಹುತೇಕ ಎಲ್ಲರೂ ಈಗ ಲ್ಯಾಪ್‌ಟಾಪ್ ಬಳಸುತ್ತಾರೆ. ಇದು ಯೂಸರ್‌ ಫ್ರೆಂಡ್ಲಿ, ಎಲ್ಲಿಗೆ ಬೇಕಾದರೂ ಇದನ್ನು ಸುಲಭವಾಗಿ ಕೊಂಡೊಯ್ಯಬಹುದು. ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಲು ಟೇಬಲ್ ಅಥವಾ ಕುರ್ಚಿ ಬೇಕೆಂದೇನಿಲ್ಲ. ಅದನ್ನು ಮಡಿಲಲ್ಲಿ ಇಟ್ಟುಕೊಂಡು ಆರಾಮವಾಗಿ ಬಳಸಬಹುದು.

ಆದರೆ ಈ ರೀತಿ ಮಾಡುವುದು ಪುರುಷರ ಪಾಲಿಗೆ ಶಾಪಕ್ಕಿಂತ ಕಡಿಮೆಯಿಲ್ಲ. ಲ್ಯಾಪ್‌ಟಾಪ್‌ಗಳು ಮತ್ತು ಪುರುಷರ ಫಲವತ್ತತೆಯ ನಡುವಿನ ನಕಾರಾತ್ಮಕ ಸಂಬಂಧವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಲ್ಯಾಪ್‌ಟಾಪ್‌ ಶಾಖದಿಂದಾಗಿ ಹಾಳಾಗುತ್ತದೆ ವೀರ್ಯ!

ಅಧ್ಯಯನದ ಪ್ರಕಾರ ಲ್ಯಾಪ್‌ಟಾಪ್‌ಗಳಿಂದ ಬಿಡುಗಡೆಯಾಗುವ ಶಾಖವು ವೃಷಣಗಳನ್ನು ರಕ್ಷಿಸುವ ಚರ್ಮವನ್ನು ಹಾನಿಗೊಳಿಸುತ್ತದೆ.  ಇದು ವೀರ್ಯದ ಗುಣಮಟ್ಟ ಮತ್ತು ಪ್ರಮಾಣ ಎರಡನ್ನೂ ಕಡಿಮೆ ಮಾಡುತ್ತದೆ. ಆರೋಗ್ಯಕರ ವೀರ್ಯಕ್ಕಾಗಿ ವೃಷಣದ ಉಷ್ಣತೆಯು ಯಾವಾಗಲೂ ದೇಹಕ್ಕಿಂತ ಕಡಿಮೆಯಿರಬೇಕು.

ಮತ್ತೊಂದು ಅಧ್ಯಯನದ ಪ್ರಕಾರ ವೈ-ಫೈ ವೀರ್ಯದ ಡಿಎನ್‌ಎಗೆ ಹಾನಿ ಮಾಡುತ್ತದೆ. ವೀರ್ಯವು ಮೊಟ್ಟೆಯನ್ನು ತ್ವರಿತವಾಗಿ ಫಲವತ್ತಾಗಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅದರ ವೇಗ ತುಂಬಾ ಕಡಿಮೆ ಆಗುತ್ತದೆ.

ಲ್ಯಾಪ್‌ಟಾಪ್ ಅನ್ನು ಮಡಿಲಲ್ಲಿ ಇಟ್ಟುಕೊಂಡು ಗಂಟೆಗಟ್ಟಲೆ ಕೆಲಸ ಮಾಡುತ್ತಿದ್ದರೆ, ಈ ತಪ್ಪಿನಿಂದಾಗಿ ತಂದೆಯಾಗುವ ಪುರುಷರ ಕನಸು ನನಸಾಗದೇ ಇರಬಹುದು. ಹಾಗಾಗಿ ಲ್ಯಾಪ್‌ಟಾಪ್ ಅನ್ನು ಯಾವಾಗಲೂ ಮೇಜಿನ ಮೇಲೆ ಇಟ್ಟುಕೊಂಡು ಬಳಸಿ.

ಇದಲ್ಲದೆ ಕಳಪೆ ಆಹಾರ ಪದ್ಧತಿ, ಮದ್ಯಪಾನ ಮತ್ತು ಸಿಗರೇಟ್ ಸೇವನೆ, ನಿದ್ರೆಯ ಕೊರತೆಯೂ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ. ತಂದೆಯಾಗಲು ಬಯಸುವವರು ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...