ಸ್ನಾನ ಮಾಡುವುದ್ರಿಂದ ದೇಹದ ಕೊಳೆ ಮಾತ್ರ ಹೋಗುವುದಿಲ್ಲ. ಮನಸ್ಸಿನ ನೋವು, ಒತ್ತಡ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸ್ನಾನ ಮಾಡುವಾಗ ದೇವರ ನಾಮವನ್ನು ಜಪಿಸಬೇಕು ಎನ್ನಲಾಗುತ್ತದೆ.
ಸ್ನಾನ ಮಾಡುವ ವೇಳೆ ಅನವಶ್ಯಕ ವಿಷ್ಯಗಳ ಬಗ್ಗೆ ಚಿಂತೆ ಮಾಡುವ ಬದಲು ದೇವರ ನಾಮಗಳನ್ನು, ಮಂತ್ರವನ್ನು ಪಠಿಸಿದ್ರೆ ಒಳ್ಳೆಯದಾಗುತ್ತದೆ.
ಶಾಸ್ತ್ರಗಳ ಪ್ರಕಾರ ಸ್ನಾನ ಮಾಡುವ ವೇಳೆ ಒಂದು ಮಂತ್ರವನ್ನು ಜಪಿಸಬೇಕು. ಇದ್ರಿಂದ ಎಲ್ಲ ಕಷ್ಟಗಳು ದೂರುವಾಗುತ್ತವೆ. ಪ್ರತಿ ದಿನ ಸ್ನಾನ ಮಾಡುವ ವೇಳೆ ಶುದ್ಧ ಮನಸ್ಸಿನಿಂದ ಈ ಮಂತ್ರವನ್ನು ಜಪಸಿದ್ರೆ ಆರೋಗ್ಯ ವೃದ್ಧಿ ಜತೆಗೆ ಆರ್ಥಿಕ ಲಾಭ ಸಿಗಲಿದೆ ಎಂದು ನಂಬಲಾಗಿದೆ. ಸ್ನಾನ ಮಾಡುವಾಗ ಏಳು ಪವಿತ್ರ ನದಿಗಳನ್ನು ಪ್ರತಿದಿನ ಜಪಿಸಬೇಕು.
ಸ್ನಾನ ಮಾಡುವ ವೇಳೆ ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು || ಮಂತ್ರವನ್ನು ಹೇಳಬೇಕು.