10 ಬ್ರೆಡ್ ತುಂಡುಗಳು
250 ಗ್ರಾಂ ಮೊಸರು
ಸ್ವಲ್ಪ ಪನ್ನೀರ್
ಕರಿಯಲು ಎಣ್ಣೆ
ಪುದೀನ ಸ್ವಲ್ಪ
ಒಂದು ಚಿಟಕಿ ಜೀರಿಗೆ ಪುಡಿ
ರುಚಿಗೆ ತಕ್ಕಂತೆ ಉಪ್ಪು ಮತ್ತು ಮೆಣಸು
1/2 ಚಮಚ ಕೆಂಪು ಮೆಣಸಿನ ಪುಡಿ
1/2 ಚಮಚ ಆಮ್ಚೂರ್ ಪುಡಿ
ಬ್ರೆಡ್ ದಹಿ ವಡಾ ಮಾಡುವ ವಿಧಾನ :
ಬ್ರೆಡ್ನ ಅಂಚುಗಳನ್ನು ಕತ್ತರಿಸಿ ಬೇರ್ಪಡಿಸಿ. ಬ್ರೆಡನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ತಕ್ಷಣ ಹಿಂಡಿರಿ. ಹಿಸುಕಿದ ಪನೀರ್ ಗೆ ಈ ಬ್ರೆಡ್ ತುಂಡುಗಳನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಕೆಂಪು ಮೆಣಸಿನಕಾಯಿ, ಉಪ್ಪು ಮತ್ತು ಆಮ್ಚೂರ್ ಪುಡಿ ಸೇರಿಸಿ ಮಿಕ್ಸ್ ಮಾಡಿ.
ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಅದನ್ನು ಕೈಯಲ್ಲಿ ಚಪ್ಪಟೆ ಮಾಡಿ ಬಿಸಿ ಮಾಡಿದ ಎಣ್ಣೆಯಲ್ಲಿ ಕರಿಯಿರಿ. ಇನ್ನೊಂದು ಪಾತ್ರೆಗೆ ಮೊಸರನ್ನು ಹಾಕಿ, ಅದಕ್ಕೆ ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಹುರಿದ ಜೀರಿಗೆ ಪುಡಿ ಸೇರಿಸಿ ಮಿಕ್ಸ್ ಮಾಡಿ. ನಂತ್ರ ತಯಾರಾದ ವಡಾ ಮೇಲೆ ಮೊಸರು ಸುರಿಯಿರಿ. ಜೀರಿಗೆ ಪುಡಿ, ಪುದೀನ ಎಲೆಯಿಂದ ಅಲಂಕರಿಸಿ.