
ಪಪ್ಪಾಯ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಔಷಧೀಯ ಗುಣಗಳಿವೆ. ಇದನ್ನು ಸೇವಿಸಿದರೆ ಕೆಲವು ಕಾಯಿಲೆಗಳನ್ನು ನಿವಾರಿಸಬಹುದು. ಹಾಗಾಗಿ ಪಪ್ಪಾಯ ಮರವನ್ನು ಮನೆ ಬಳಿಯೇ ಬೆಳೆಸಿದರೆ ಇನ್ನೂ ಉತ್ತಮ.
ಆದರೆ ಕೆಲವೊಮ್ಮೆ ಮನೆಯ ಬಳಿ ಪಪ್ಪಾಯ ಬೆಳೆಸಿದರೂ ಅದು ಸರಿಯಾಗಿ ಹಣ್ಣು ಗಳನ್ನು ಬಿಡುವುದಿಲ್ಲ. ಹಾಗಾಗಿ ಪಪ್ಪಾಯ ಮರದಲ್ಲಿ ಚೆನ್ನಾಗಿ ಹಣ್ಣು ಬೆಳೆಯಲು ಈ ಟಿಪ್ಸ್ ಫಾಲೋ ಮಾಡಿ.
-ಪಪ್ಪಾಯ ಮರದಲ್ಲಿ ಗಂಡು ಮತ್ತು ಹೆಣ್ಣು ಮರಗಳಿವೆ. ಇದರಲ್ಲಿ ಗಂಡು ಮರ ಹಣ್ಣುಗಳನ್ನು ನೀಡುವುದಿಲ್ಲ. ಆದರೆ ಹೆಣ್ಣು ಮರದಲ್ಲಿ ಮಾತ್ರ ಹಣ್ಣುಗಳು ಬೆಳೆಯುತ್ತವೆ. ಹಾಗಾಗಿ ತಜ್ಞರ ಸಹಾಯದಿಂದ ಹೆಣ್ಣು ಮರವನ್ನು ಗುರುತಿಸಿ ನೆಡಿ.
-ಪಪ್ಪಾಯ ಸಸ್ಯದಲ್ಲಿ ಕೀಟಗಳ ಹಾವಳಿ ಹೆಚ್ಚಾಗಿದ್ದರೆ ಸಸ್ಯ ಬೆಳವಣಿಗೆ ಹೊಂದುವುದಿಲ್ಲ. ಪಪ್ಪಾಯ ಮರದ ಮೇಲಿನ ಕೀಟಗಳ ಬಗ್ಗೆ ನಮಗೆ ತಿಳಿಯುವುದಿಲ್ಲ. ಆದರೆ ಗಿಡ ಹೂ ಬಿಡಲು ಪ್ರಾರಂಭಿಸಿದಾಗ ನಮಗೆ ಈ ಸಮಸ್ಯೆ ತಿಳಿಯುತ್ತದೆ. ಹಾಗಾಗಿ ಕೀಟಗಳು ಪಪ್ಪಾಯ ಸಸ್ಯದ ಎಲೆ, ಹೂಗಳನ್ನು ತಿನ್ನುತ್ತವೆ. ಹಾಗಾಗಿ ಆ ಎಲೆಗಳನ್ನು ಕಿತ್ತು ಹಾಕಿ.
-ಹೆಚ್ಚಿನ ಜನರು ಹಸುವಿನ ಸಗಣಿಯನ್ನು ಗೊಬ್ಬರವಾಗಿ ಬಳಸುತ್ತಾರೆ. ಇದರಿಂದ ಕೀಟಗಳ ಹಾವಳಿ ಹೆಚ್ಚಾಗುತ್ತದೆ. ಹಾಗಾಗಿ ಪಪ್ಪಾಯ ಮರವನ್ನು ಕೀಟಗಳಿಂದ ರಕ್ಷಿಸಲು ಪಪ್ಪಾಯ ಕಾಂಡದಿಂದ ಅರ್ಧ ಅಡಿ ದೂರದಲ್ಲಿ ಮಣ್ಣನ್ನು ಅಗೆದು ಅದರಲ್ಲಿ ಹಸುವಿನ ಸಗಣಿಯನ್ನು ಬೆರೆಸಿ. ಇದರಿಂದ ಕೀಟಗಳು ಪರಿಣಾಮ ಬೀರುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವಂತಹ ಕೀಟ ನಾಶಕಗಳನ್ನು ಬಳಸಬಹುದು.
ಹಾಗೇ ಪಪ್ಪಾಯ ಮರದ ಸುತ್ತಲೂ ತೇವಾಂಶ ಬರದಂತೆ ನೋಡಿಕೊಳ್ಳಿ. ತೇವಾಂಶ ಹೆಚ್ಚಾದರೆ ಮರ ಕೊಳೆಯುತ್ತದೆ.