‘ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿದ್ರೆ ರೇಪ್ ಕೇಸ್ ಕಡಿಮೆಯಾಗುತ್ತೆ’ : ‘ಕಿರಾತಕ’ ನಟಿ ಓವಿಯಾ ಸಲಹೆ

ಚೆನ್ನೈ : ವೇಶ್ಯಾವಾಟಿಕೆಯನ್ನು ಕಾನೂನುಬದ್ದಗೊಳಿಸಿ ಎಂದು ಕಿರಾತಕ ಚಿತ್ರ ಖ್ಯಾತಿಯ ನಟಿ ಓವಿಯಾ ಹೇಳಿಕೆ ನೀಡಿದ್ದು, ಹಲವು ರೀತಿಯಲ್ಲಿ ಚರ್ಚೆಗಳಾಗುತ್ತಿದೆ. ಪರ ಹಾಗೂ ವಿರೋಧ ಕಮೆಂಟ್ ಗಳು ಬರುತ್ತಿದೆ.

ಖಾಸಗಿ ಚಾನೆಲ್ ನಲ್ಲಿ ನಡೆದ ಸಂದರ್ಶನವೊಂದರಲ್ಲಿ ನಟಿ ಈ ಹೇಳಿಕೆ ನೀಡಿದ್ದಾರೆ.”ಲೈಂಗಿಕ ಶಿಕ್ಷಣವನ್ನು ಪ್ರಾಯೋಗಿಕವಾಗಿ ಮಾಡಬೇಕು. ಎಲ್ಲರೂ ತಮ್ಮ ಲೈಂಗಿಕ ಆಸೆಗಳನ್ನು ಅದುಮಿಟ್ಟುಕೊಂಡು ಮುಖವಾಡ ಧರಿಸಿ ಬದುಕುತ್ತಿದ್ದಾರೆ. ಪ್ರತಿಯೊಬ್ಬರಿಗೂ ಒಂದು ಆಸೆ ಇರುತ್ತದೆ. ಹಾರ್ಮೋನುಗಳಿವೆ. ಅನೇಕ ಜನರು ಸಂಸ್ಕೃತಿಯ ಹಿಂದೆ ಅಡಗಿಕೊಂಡಿದ್ದಾರೆ. ಅದೇ ಸತ್ಯ. ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು. ನಾವು ಅದನ್ನು ಮಾಡಿದರೆ, ಎಲ್ಲಾ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತವೆ” ಎಂದು ಅವರು ಹೇಳಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಓವಿಯಾ ಕಲಾವಾಣಿ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ನಂತರ ಕನ್ನಡದ ಕಿರಾತಕ ಸಿನಿಮಾದಲ್ಲಿ ನಟಿಸಿ ಓವಿಯಾ ಸಖತ್ ಫೇಮಸ್ ಆದರು. ಆದರೆ ಹೆಚ್ಚು ಅವಕಾಶಗಳು ನಟಿ ಓವಿಯಾಗೆ ಸಿಗಲಿಲ್ಲ. ಇದೀಗ ವೇಶ್ಯಾವಾಟಿಕೆ ಬಗ್ಗೆ ಮಾತನಾಡುವ ಮೂಲಕ ನಟಿ ಓವಿಯಾ ಸುದ್ದಿಯಲ್ಲಿದ್ದಾರೆ. ವೇಶ್ಯಾವಾಟಿಕೆಯನ್ನು ಕಾನೂನುಬದ್ಧವಾಗಿ ಮಾಡಿದ್ರೆ ಮಾತ್ರ ಅತ್ಯಾಚಾರವನ್ನು ತಡೆಗಟ್ಟಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read