ಬೆಂಗಳೂರು: ವಿಪಕ್ಷ ನಾಯಕರ ಮಹಾ ಮೈತ್ರಿ ಕೂಟ ಸಭೆಯನ್ನು ಟೀಕಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಜೆಡಿಎಸ್ ಗೆ ಸಿದ್ಧಾಂತಗಳೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ಗೆ ಒಂದು ಸಿದ್ಧಾಂತ ಅನ್ನೋದು ಇಲ್ಲ, ಬಿಜೆಪಿ ಜೊತೆ ಹೋದ್ರೆ ಜಾತ್ಯಾತೀತ ಪಕ್ಷನಾ? ಸಿದ್ಧಾಂತವನ್ನೇ ಬಲಿಕೊಟ್ಟು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಪಕ್ಷ ಉಳಿಸಿಕೊಳ್ಳಲು ಸಿದ್ಧಾಂತ ಬಲಿ ಕೊಡ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಮಹಾಘಟಬಂಧನ್ ಸಭೆ ಕರೆದಿದ್ದು ಯಾರು? ವಿಪಕ್ಷಗಳ ಜೊತೆ ಸಂಬಂಧ ಮುಂದುವರೆಸಿದ್ರಾ? ಈಗ ಬಿಜೆಪಿ ಜೊತೆ ಕೈಜೋಡಿಸಲು ಹೊರಟಿದ್ದಾರೆ. ಜೆಡಿಎಸ್ ಗೆ ಯಾವ ಸಿದ್ಧಾಂತವೂ ಇಲ್ಲ. ಈ ಬಾರಿ ನರೇಂದ್ರ ಮೋದಿಯವರಿಗೆ ಬಹುಮತ ಸಿಗಲ್ಲ, ಅವರು ಸೋಲುತ್ತಾರೆ ಎಂದು ಹೇಳಿದರು.