ಭಾರೀ ಥ್ರಿಲ್ ಕೊಡುವ ಚಟುವಟಿಕೆಗಳಲ್ಲಿ ಒಂದು ಪರ್ವತಾರೋಹಣ. ಮಾನವನ ದೈಹಿಕ ಹಾಗೂ ಮಾನಸಿಕ ಕ್ಷಮತೆಗಳನ್ನು ಸಂಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗೆ ಒಳಪಡಿಸುವ ಪರ್ವತಾರೋಹಣದ ಉತ್ಸಾಹಿಗಳು ನೇಪಾಳದಲ್ಲಿರುವ ಮೌಂಟ್ ಎವರೆಸ್ಟ್ ಶಿಖರವನ್ನೇರಲು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ.
ಮಾನವನ ಚಟುವಟಿಕೆಗಳು ಎಲ್ಲೇ ನಡೆದರೂ ಅಲ್ಲಿ ಕಸ ಸೃಷ್ಟಿಯಾಗುತ್ತದೆ ಎಂಬ ಅಲಿಖಿತ ನಿಯಮ ಮೌಂಟ್ ಎವರೆಸ್ಟ್‌ಗೂ ಅನ್ವಯವಾಗುತ್ತಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಶೇರ್ ಮಾಡಿಕೊಂಡಿರುವ ಈ ಹೃದಯ ವಿದ್ರಾವಕ ವಿಡಿಯೋದಲ್ಲಿ, ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್ ಒಂದು ತ್ಯಾಜ್ಯದ ಗುಡ್ಡೆಯಾಗಿ ಮಾರ್ಪಟ್ಟಿರುವುದನ್ನು ನೋಡಬಹುದು.
“ಮಾನವರು ತಮ್ಮ ತ್ಯಾಜ್ಯ ಸುರಿದು ಪ್ಲಾಸ್ಟಿಕ್ ಮಾಲಿನ್ಯ ಸೃಷ್ಟಿಸುವ ವಿಚಾರದಲ್ಲಿ ಮೌಂಟ್ ಎವರೆಸ್ಟನ್ನೂ ಬಿಟ್ಟಿಲ್ಲ,” ಎಂದು ಕ್ಯಾಪ್ಷನ್ ಕೊಟ್ಟು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಸುಪ್ರಿಯಾ ಸಾಹು.