ಡಿಸ್ನೀ+ ಹಾಟ್‌ಸ್ಟಾರ್ ಚಂದಾದಾರರಿಗೆ ಇನ್ನು ಮುಂದೆ ಗೇಂ ಆಫ್ ಥ್ರೋನ್ಸ್‌ನಂಥ ಎಚ್‌ಬಿಓ ಕ್ಲಾಸಿಕ್‌ಗಳ ಸ್ಟ್ರೀಮಿಂಗ್ ಮಾಡಲು ಸಾಧ್ಯವಿಲ್ಲ. ಇದೇ ವಿಚಾರವನ್ನು ಟ್ವಿಟರ್ ಮೂಲಕ ಒಟಿಟಿ ಪ್ಲಾಟ್‌ಫಾರಂ ಘೋಷಣೆ ಮಾಡಿದೆ.
ತಮ್ಮ ಮೆಚ್ಚಿನ ಶೋ ಪ್ಲಾಟ್‌ಫಾರಂನಲ್ಲಿ ಮೂಡದೇ ಇದ್ದಿದ್ದನ್ನು ಕಂಡು ಹತಾಶರಾದ ಚಂದಾದಾರರು ತಮ್ಮ ಸಿಟ್ಟನ್ನು ಕಾರಿಕೊಳ್ಳಲು ಆರಂಭಿಸಿದ್ದಾರೆ. ಮೀಮ್‌ಗಳು ಹಾಗೂ ಟ್ವೀಟ್‌ಗಳ ಮೂಲಕ ನೆಟ್ಟಿಗರು ತಮ್ಮ ಸಿಟ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಕಾರಿಕೊಂಡಿದ್ದಾರೆ.
ಕೆಲವರಂತೂ ತಮ್ಮ ದುಡ್ಡನ್ನು ವಾಪಸ್ ಕೊಡುವಂತೆ ಕೇಳಿದ್ದು, ಒಂದು ವರ್ಷದ ಚಂದಾದಾರಿಕೆ ಪಡೆದ ತಮ್ಮ ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
“ಮಾರ್ಚ್ 31ರಿಂದ ಆರಂಭಗೊಳ್ಳುವಂತೆ, ಎಚ್‌ಬಿಓ ಕಂಟೆಂಟ್ ಡಿಸ್ನೀ+ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುವುದಿಲ್ಲ. 100,000 ಗಂಟೆಗಳಿಗೂ ಮೀರಿದ ಟಿವಿ ಶೋಗಳು ಹಾಗೂ 10 ಭಾಷೆಗಳಲ್ಲಿರುವ ಮೂವಿಗಳು ಹಾಗೂ ದೊಡ್ಡ ಕ್ರೀಡಾ ಚಟುವಟಿಕೆಗಳಿರುವ ಬೃಹತ್ ಲೈಬ್ರರಿಯ ಅನ್ವೇಷಣೆಯನ್ನು ನೀವು ಇನ್ನು ಮುಂದೆ ಎಂಜಾಯ್ ಮಾಡುವುದನ್ನು ಮುಂದುವರೆಸಬಹುದು,” ಎಂದು ಟ್ವೀಟ್ ಮೂಲಕ ಡಿಸ್ನಿ+ ಹಾಟ್‌ಸ್ಟಾರ್ ತಿಳಿಸಿದೆ.