ಮುಂಬೈ: ವಿಐಪಿ ವಾಹನಗಳ ಸೈರನ್ ಗಳನ್ನು ಕೊನೆಗೊಳಿಸಲು ಯೋಜಿಸುತ್ತಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
ಪುಣೆಯ ಚಾಂದಿನಿ ಚೌಕ್ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಹೇಳಿಕೆ ನೀಡಿದ್ದಾರೆ.
ಶಬ್ದ ಮಾಲಿನ್ಯವನ್ನು ನಿಯಂತ್ರಿಸುವುದು ಬಹಳ ಮುಖ್ಯ. ವಿಐಪಿಗಳ ವಾಹನದ ಮೇಲಿನ ಕೆಂಪು ದೀಪ(ಬೀಕನ್) ಅನ್ನು ಕೊನೆಗೊಳಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈಗ, ನಾನು ವಿಐಪಿ ವಾಹನಗಳ ಸೈರನ್‌ಗಳನ್ನು ಕೊನೆಗೊಳಿಸಲು ಯೋಜಿಸುತ್ತಿದ್ದೇನೆ ಎಂದು ಹೇಳಿದರು.
ಹಾರ್ನ್, ಸೈರನ್ ಗಳ ಶಬ್ದವನ್ನು ಭಾರತೀಯ ಸಂಗೀತ ವಾದ್ಯಗಳ ಹಿತವಾದ ಸಂಗೀತದೊಂದಿಗೆ ಬದಲಾಯಿಸಲು ನಾನು ಬಯಸುತ್ತೇನೆ ಎಂದು ಗಡ್ಕರಿ ಹೇಳಿದರು. ನಾನು ಸೈರನ್ ಶಬ್ದವನ್ನು ಕೊಳಲು, ತಬಲಾ ಮತ್ತು ‘ಶಂಖ್’ ಶಬ್ದದಿಂದ ಬದಲಾಯಿಸುವ ನೀತಿಯನ್ನು ಮಾಡುತ್ತಿದ್ದೇನೆ. ಜನರು ಶಬ್ದ ಮಾಲಿನ್ಯದಿಂದ ಮುಕ್ತರಾಗಬೇಕೆಂದು ನಾನು ಬಯಸುತ್ತೇನೆ ಎಂದು ಗಡ್ಕರಿ ಹೇಳಿದರು.