alex Certify ಇಂಡಿಯನ್ ʼಕಾರ್ ಆಫ್ ದಿ ಇಯರ್ʼ 2024; ‘ಹ್ಯುಂಡೈ ಎಕ್ಸ್ ಟರ್‌ ‘ಗೆ ಪ್ರತಿಷ್ಠಿತ ಪ್ರಶಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಡಿಯನ್ ʼಕಾರ್ ಆಫ್ ದಿ ಇಯರ್ʼ 2024; ‘ಹ್ಯುಂಡೈ ಎಕ್ಸ್ ಟರ್‌ ‘ಗೆ ಪ್ರತಿಷ್ಠಿತ ಪ್ರಶಸ್ತಿ

19 ನೇ ಆವೃತ್ತಿಯ ಇಂಡಿಯನ್ ಕಾರ್ ಆಫ್ ದಿ ಇಯರ್ (ICOTY) 2024 ಪ್ರಶಸ್ತಿಯನ್ನು ಹ್ಯುಂಡೈ ಎಕ್ಸ್ ಟರ್‌ ಪಡೆದುಕೊಂಡಿದೆ. ಭಾರತೀಯ ಆಟೋಮೋಟಿವ್ ಉದ್ಯಮದ ‘ಆಸ್ಕರ್’ ಎಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುವ ಇಂಡಿಯನ್ ಕಾರ್ ಆಫ್ ದಿ ಇಯರ್ (ICOTY) ಪ್ರಶಸ್ತಿಗಳಲ್ಲಿ ಮಾರುತಿ ಸುಜುಕಿ ಜಿಮ್ನಿ ಮೊದಲನೆಯ ರನ್ನರ್ ಅಪ್ ಆಗಿದ್ದರೆ, ಹೋಂಡಾ ಎಲಿವೇಟ್ ಮತ್ತು ಟೊಯೊಟಾ ಇನ್ನೋವಾ ಹೈಕಾರ್ಸ್ ಎರಡನೇ ರನ್ನರ್ ಅಪ್ ಆಗಿವೆ. ಪ್ರಶಸ್ತಿಗಾಗಿ ಇತರ ಸ್ಪರ್ಧಿಗಳಲ್ಲಿ ಸಿಟ್ರೊಯೆನ್ C3 ಏರ್‌ಕ್ರಾಸ್, ಹುಂಡೈ ವೆರ್ನಾ, ಮಹೀಂದ್ರಾ XUV400 ಮತ್ತು MG ಕಾಮೆಟ್ ಸೇರಿವೆ.

BMW 7 ಸರಣಿಯು ವರ್ಷದ ಪ್ರೀಮಿಯಂ ಕಾರು ಪ್ರಶಸ್ತಿಯನ್ನು ಪಡೆದುಕೊಂಡಿತು, ಹ್ಯುಂಡೈ Ioniq 5 ಅನ್ನು ICOTY ಯಿಂದ ವರ್ಷದ ಹಸಿರು ಕಾರು ಎಂದು ಘೋಷಿಸಲಾಯಿತು. ಭಾರತದಾದ್ಯಂತ ವ್ಯಾಪಕವಾಗಿ ಗುರುತಿಸಲ್ಪಟ್ಟ ನಿಯತಕಾಲಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳ ವೃತ್ತಿಪರ ಆಟೋಮೋಟಿವ್ ಪತ್ರಕರ್ತರು ತೀರ್ಪುಗಾರರಾಗಿದ್ದರು. ಪ್ರತಿಯೊಂದು ವಿಭಾಗಗಳ ವಿಜೇತರನ್ನು ತೀರ್ಪುಗಾರರು ಆಯ್ಕೆ ಮಾಡಿದರು.

ಹ್ಯುಂಡೈ ಎಕ್ಸ್ ಟರ್ 83bhp ಮತ್ತು 113.8Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ MT ಅಥವಾ AMT ಗೇರ್‌ಬಾಕ್ಸ್ ಗೆ ಜೋಡಿಸಲಾಗಿದೆ. ಹ್ಯುಂಡೈ ಕಾರಿಗೆ CNG ಪವರ್‌ಟ್ರೇನ್‌ನ ಆಯ್ಕೆಯನ್ನು ಸಹ ನೀಡುತ್ತದೆ. ಎಲ್‌ಇಡಿ ಲೈಟಿಂಗ್, ಸನ್‌ರೂಫ್, ಕ್ಲೈಮೇಟ್ ಕಂಟ್ರೋಲ್, ಡ್ಯಾಶ್‌ಬೋರ್ಡ್ ಕ್ಯಾಮೆರಾ, ರಿಯರ್-ಎಸಿ ವೆಂಟ್‌ಗಳು, ವೈರ್‌ಲೆಸ್ ಚಾರ್ಜರ್ ವೈಶಿಷ್ಯ್ ಗಳನ್ನು ಇದು ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...