ಬೆಲ್ಜಿಯಂನಾದ್ಯಂತ ಇರುವ ಸಲೂನ್ ಅಂಗಡಿಯವರು ತಮ್ಮ ಗ್ರಾಹಕರ ಕೂದಲನ್ನು ಸಂಗ್ರಹಿಸಿ ಅದರಿಂದಲೇ ಬ್ಯಾಗ್ ಮಾಡುತ್ತಿದ್ದಾರೆ ಮತ್ತು ಪರಿಸರವನ್ನು ರಕ್ಷಿಸಲು ಅದನ್ನು ಮರುಬಳಕೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹಸ್ತಾಂತರಿಸುತ್ತಾರೆ.
ಹೇರ್ ರೀಸೈಕಲ್ ಯೋಜನೆಯು ಇಲ್ಲೀಗ ಟ್ರೆಂಡ್ ಆಗಿದೆ. ಯಂತ್ರಗಳಿಗೆ ಕೂದಲನ್ನು ಹಾಕುವ ಮೂಲಕ ಅದಕ್ಕೆ ಬಗೆ ಬಗೆ ರೂಪಕೊಡಲಾಗುತ್ತಿದೆ. ಪರಿಸರವನ್ನು ಮಾಲಿನ್ಯಗೊಳಿಸುವ ತೈಲ ಮತ್ತು ಇತರ ಹೈಡ್ರೋಕಾರ್ಬನ್‌ಗಳನ್ನು ಹೀರಿಕೊಳ್ಳಲು ಅಥವಾ ಜೈವಿಕ-ಸಂಯೋಜಿತ ಚೀಲಗಳಾಗಿ ಕೂದಲನ್ನು ತಯಾರಿಸಲಾಗುತ್ತಿದೆ.
ಈ ಯೋಜನೆಯ ಸಹ-ಸಂಸ್ಥಾಪಕ ಪ್ಯಾಟ್ರಿಕ್ ಜಾನ್ಸೆನ್ ಈ ಕುರಿತು ಮಾಹಿತಿ ನೀಡಿದ್ದಾರೆ. 1 ಕಿಲೋಗ್ರಾಂ (2.2 ಪೌಂಡ್) ಕೂದಲು 7-8 ಲೀಟರ್ (1.8-2.1 U.S. ಗ್ಯಾಲನ್) ತೈಲ ಮತ್ತು ಹೈಡ್ರೋಕಾರ್ಬನ್‌ಗಳನ್ನು ಹೀರಿಕೊಳ್ಳುತ್ತದೆ ಎಂದು ಅವರು ವಿವರಿಸುತ್ತಾರೆ. ಮೊದಲು ನೀರಿನಲ್ಲಿ ಮಾಲಿನ್ಯವನ್ನು ಹೀರಿಕೊಳ್ಳಲು ಮ್ಯಾಟ್‌ಗಳನ್ನು ಡ್ರೈನ್‌ಗಳಲ್ಲಿ ಇರಿಸಬಹುದು ಎಂದು ಅವರು ಹೇಳುತ್ತಾರೆ.
“ನಮ್ಮ ಉತ್ಪನ್ನಗಳು ಸ್ಥಳೀಯವಾಗಿ ತಯಾರಿಸಲ್ಪಟ್ಟಿರುವುದರಿಂದ ಅವು ಹೆಚ್ಚು ಪ್ರಯೋಜನಕಾರಿಯಾಗಿವೆ. ಇಂದಿನ ದಿನಗಳಲ್ಲಿ ಕೂದಲನ್ನು ತೊಟ್ಟಿಯಲ್ಲಿ ಎಸೆಯಲಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ, ಇದರಿಂದ ತುಂಬಾ ಪ್ರಯೋಜನಗಳಿವೆ. ಅವುಗಳ ಪ್ರಯೋಜನ ಪಡೆದುಕೊಂಡು ನಿಸರ್ಗವನ್ನು ಕಾಪಾಡಬಹುದು ಎನ್ನುತ್ತಾರೆ.