ಬೆಂಗಳೂರು: ಹಳೆ ವಾಹನಗಳಿಗೆ HSRP ಅಳವಡಿಕೆ ಗಡುವು ಸಮೀಪಿಸುತ್ತಿದ್ದು, ಕೆಲವು ಕಂಪನಿಗಳ ವಾಹನ ಖರೀದಿಸಿದವರಿಗೆ HSRP ಅಳವಡಿಸಿಕೊಳ್ಳುವುದೇ ಸಮಸ್ಯೆಯಾಗಿದೆ.
ಜಾವಾ, ಯೆಜ್ಡಿ, ಫೋರ್ಡ್, ಕೈನೆಟಿಕ್ ಹೋಂಡಾ, ವಿಲ್ಲೀಸ್, ದೇವೂ ಸೇರಿದಂತೆ ಅನೇಕ ವಾಹನ ಕಂಫನಿಗಳು ಬಂದ್ ಆಗಿದ್ದು, ಈ ಕಂಪನಿಗಳ ವಾಹನಗಳನ್ನು ಖರೀದಿಸಿದ್ದವರಿಗೆ HSRP ಅಳವಡಿಸಿಕೊಳ್ಳುವುದು ಸಮಸ್ಯೆಯಾಗಿದೆ.
2019ರ ಏಪ್ರಿಲ್ 1ರ ಮೊದಲು ನೋಂದಣಿಯಾದ ಎಲ್ಲಾ ವಾಹನಗಳಿಗೂ ಕಡ್ಡಾಯವಾಗಿ HSRP ಅಳವಡಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿಯೂ ಈ ಆದೇಶ ಜಾರಿಯಾಗಿದ್ದು, 2019ರ ಏಪ್ರಿಲ್ 1ರಿಂದ ಹೊಸ ವಾಹನಗಳಿಗೆ ಶೋ ರೂಮ್ ಗಳಲ್ಲೇ HSRP ಅಳವಡಿಸಲಾಗುತ್ತಿದೆ.
2019ರ ಏಪ್ರಿಲ್ 1ಕ್ಕೆ ಮೊದಲು ಖರೀದಿಸಿದ ಜಾವಾ, ಯೆಜ್ಡಿ, ಫೋರ್ಡ್, ಕೈನೆಟಿಕ್ ಹೋಂಡಾ, ವಿಲ್ಲೀಸ್, ದೇವೂ ಸೇರಿದಂತೆ ಕೆಲವು ಕಂಪನಿಗಳ ಕಾರ್, ಬೈಕ್, ದ್ವಿಚಕ್ರ ವಾಹನಗಳಲ್ಲಿ ಹಳೆ ನೋಂದಣಿ ಫಲಕಗಳು ಇವೆ. ನಿಗದಿತ ಗಡುವಿನೊಳಗೆ HSRP ಅಳವಡಿಸಿಕೊಳ್ಳಲು ಈ ಕಂಪನಿಗಳು ಬಂದ್ ಆಗಿರುವುದರಿಂದ ವಾಹನಗಳ ಮಾಲೀಕರು ನಿಗದಿತ ಅವಧಿಯೊಳಗೆ HSRP ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
HSRP ಅಳವಡಿಕೆಗೆ ಆನ್ಲೈನ್ ನಲ್ಲಿ ಮುಂಗಡವಾಗಿ ಕೋರಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಪೋರ್ಟಲ್ಲಿ ತಮ್ಮ ವಾಹನದ ಕಂಪನಿ ಆಯ್ಕೆ ಮಾಡಿ ನಿಗದಿತ ಶುಲ್ಕ ಪಾವತಿಸಬೇಕು. ವಾಹನ ಉತ್ಪಾದಕ ಕಂಪನಿಗಳು HSRP ಪ್ಲೇಟ್ ಗಳನ್ನು ವಾಹನ ಮಾರಾಟದ ಶೋರೂಮ್ ಗಳಿಗೆ ಪೂರೈಸಲು ಅಧಿಕೃತ HSRP ಏಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ.
ಉತ್ಪಾದನೆ ನಿಲ್ಲಿಸಿರುವ ಕೆಲವು ವಾಹನ ಕಂಪನಿಗಳು ಅಧಿಕೃತ ಹೆಚ್ಎಸ್ಆರ್ಪಿ ಏಜೆನ್ಸಿಗಳೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಉತ್ಪಾದನೆ ನಿಲ್ಲಿಸಿದ ವಾಹನ ಕಂಪನಿಗಳ ಹೆಸರು ಪೋರ್ಟಲ್ ಗಳಲ್ಲಿಯೂ ಇಲ್ಲ. ನಿಗದಿತ ಅವಧಿ ಒಳಗೆ ಹೆಚ್ಎಸ್ಆರ್ಪಿ ಅಳವಡಿಸಿಕೊಳ್ಳದಿದ್ದರೆ ದಂಡ ವಿಧಿಸಲಾಗುತ್ತದೆ. ಉತ್ಪಾದನೆ ನಿಲ್ಲಿಸಿದ ಕಂಪನಿ ವಾಹನ ಖರೀದಿಸಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಬೇಕೆಂಬುದು ಮನವಿ ಮಾಡಿದ್ದಾರೆ.
ಉತ್ಪಾದನೆ ನಿಲ್ಲಿಸಿದ ಕೆಲವು ಕಂಪನಿಗಳ HSRP ಪ್ಲೇಟ್ ಸಿಗದೇ ವಾಹನ ಮಾಲೀಕರಿಗೆ ಸಮಸ್ಯೆಯಾಗಿದ್ದು, ಈ ಸಂಬಂಧ ಸಾಕಷ್ಟು ದೂರುಗಳು ಕೂಡ ಸಾರಿಗೆ ಇಲಾಖೆಗೆ ಸಲ್ಲಿಕೆಯಾಗಿದೆ. ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಕ್ಕೆ ಈ ಬಗ್ಗೆ ಪತ್ರ ಬರೆದು ಸ್ಪಷ್ಟನೆ ಕೇಳಲಾಗಿದೆ.