ಕೊಬ್ಬರಿ ಎಣ್ಣೆ ತಲೆಕೂದಲಿಗೆ ಉಪಯೋಗಿಸುತ್ತೇವೆ. ಅದರಿಂದ ಕೂದಲು ಆರೋಗ್ಯವಾಗಿರುತ್ತದೆ ಹಾಗೂ ನಯವಾಗುತ್ತದೆ. ಜೊತೆಗೆ ಕೊಬ್ಬರಿ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡರೆ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ.
ಇಲ್ಲಿವೆ ಅದನ್ನು ಬಳಸುವ ವಿಧಾನ.
* ಗುಲಾಬಿ ಜಲ ಮತ್ತು ಕೊಬ್ಬರಿಎಣ್ಣೆ ಎರಡನ್ನೂ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಫ್ರಿಜ್ ನಲ್ಲಿಟ್ಟು ಕೊಳ್ಳಬೇಕು. ರಾತ್ರಿ ಮಲಗುವ ಮುನ್ನ ಇದರಲ್ಲಿ ಅದ್ದಿದ ಹತ್ತಿಯಿಂದ ಮೃದುವಾಗಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಪ್ರತಿದಿನ ಈ ರೀತಿ ಮಾಡಿದರೆ ಚರ್ಮ ಮೃದುವಾಗುತ್ತದೆ.
* 4 ಚಮಚ ಓಟ್ ಮೀಲ್ ಪೌಡರ್, ಜೇನು, ಕೊಬ್ಬರಿ ಎಣ್ಣೆ ಎಲ್ಲವನ್ನು ಕಲಸಿ ಮುಖ, ಕತ್ತು, ಕೈಗಳಿಗೆ ಪ್ಯಾಕ್ ಹಾಕಿಕೊಳ್ಳಬೇಕು. ಸ್ವಲ್ಪ ಸಮಯದ ಬಳಿಕ ಮುಖ ತೊಳೆದುಕೊಂಡರೆ ಸತ್ತ ಜೀವಕೋಶಗಳು ದೂರವಾಗಿ ಚರ್ಮ ಹೊಳಪು ಪಡೆದುಕೊಳ್ಳುತ್ತದೆ.
* ಮೊಟ್ಟೆಯ ಬಿಳಿ ಭಾಗಕ್ಕೆ ಸ್ವಲ್ಪ ಮುಸುಕಿನ ಜೋಳದ ಪುಡಿ, ಒಂದು ಚಮಚ ಕೊಬ್ಬರಿ ಎಣ್ಣೆ, ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಿ ಕೊಳ್ಳಬೇಕು. ಒಣಗಿದ ಬಳಿಕ ಮುಖವನ್ನು ತೊಳೆದುಕೊಂಡರೆ ಚರ್ಮವು ಪಳಪಳನೆ ಹೊಳೆಯುತ್ತದೆ.
* ಕೊಬ್ಬರಿ ಎಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಚಿಟಿಕೆಯಷ್ಟು ಸಮುದ್ರ ಲವಣ, ನಾಲ್ಕು ಹನಿ ನಿಂಬೆರಸ ಬೆರೆಸಿ ಮೊಣಕೈಗಳಿಗೆ ಹಚ್ಚಿಕೊಳ್ಳಬೇಕು. ಕಾಲು ಗಂಟೆ ಬಳಿಕ ನಿಂಬೆ ಹಣ್ಣಿನ ಸಿಪ್ಪೆಯನ್ನು ಸಕ್ಕರೆಯಲ್ಲಿ ಅದ್ದಿ ಆ ಸ್ಥಳವನ್ನು ಮೃದುವಾಗಿ ಉಜ್ಜಿದರೆ ಚರ್ಮವು ಕೋಮಲವಾಗುತ್ತದೆ ಮತ್ತು ಕಪ್ಪು ಕಡಿಮೆಯಾಗುತ್ತದೆ.