ಬೇಕಾಗುವ ಸಾಮಗ್ರಿಗಳು : ತೊಗರಿ ಬೇಳೆ- 1 ಕಪ್, ಆರ್ಕ-1 ಕಪ್, ಬೀನ್ಸ್, ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಆಲೂಗಡ್ಡೆ, ಟೊಮಾಟೊ ಹೆಚ್ಚಿದ್ದು, ಹೆಚ್ಚಿದ ಈರುಳ್ಳಿ- 3 ಚಮಚ, ಬಟಾಣಿ- 2 ಚಮಚ, ಕೊತ್ತಂಬರಿ- 1/2 ಕಪ್, ಉಪ್ಪು, ಹುಣಸೆ ರಸ- 4 ಚಮಚ, ಬೆಲ್ಲ- ಸ್ವಲ್ಪ, ಒಗ್ಗರಣೆಗೆ ಸಾಸಿವೆ -1/2 ಚಮಚ, ಕರಿಬೇವು- 1 ಕಡ್ಡಿ, ಕಡಲೇ ಬೀಜ, ತೆಳುವಾಗಿ ಕತ್ತರಿಸಿದ ಕೊಬ್ಬರಿ ತುಂಡು- 10, ಅರಿಶಿನ- 1/2 ಚಮಚ, ಚಿಟಕಿ ಇಂಗು.
ಮಸಾಲೆ ಪುಡಿಗೆ : ಕಡಲೆ ಬೇಳೆ 1/2 ಚಮಚ, ಲವಂಗ 5 ತುಂಡು, ಚಕ್ಕೆ, ಜಾಯಿಕಾಯಿ ಸ್ವಲ್ಪ, ತುಪ್ಪ 5 ಚಮಚ, ಎಣ್ಣೆ 4 ಚಮಚ, ಒಣಮೆಣಸಿನಕಾಯಿ- 8, ದನಿಯಾ- ಕಾಲು ಚಮಚ.
ಮಾಡುವ ವಿಧಾನ : 2 ಚಮಚ ತುಪ್ಪದಲ್ಲಿ ಕಡಲೆ ಬೇಳೆ ಹುರಿದು ತೆಗೆಯಿರಿ, ಮಿಕ್ಕ ತುಪ್ಪದಲ್ಲಿ ಚಕ್ಕೆ, ಲವಂಗ, ಜಾಯಿಕಾಯಿಗಳನ್ನು ಘಂ ಎನ್ನುವಂತೆ ಹುರಿದು ತೆಗೆಯಿರಿ. ಧನಿಯಾ, ಒಣ ಮೆಣಸನ್ನು ಹುರಿದು ಎಲ್ಲವನ್ನೂ ಪುಡಿ ಮಾಡಿಡಿ. ಕುಕ್ಕರ್ ನಲ್ಲಿ ಶುಚಿಗೊಳಿಸಿದ ಆರ್ಕ ಮತ್ತು ತೊಗರಿ ಬೇಳೆ, ಅರಿಶಿಣ, ತರಕಾರಿಗಳನ್ನು ಸ್ವಲ್ಪವೇ ಉಪ್ಪು ಮತ್ತು ನೀರಿನೊಡನೆ ಬೇಯಿಸಿ. ಹುರಿದು ಪುಡಿ ಮಾಡಿದ ಮಸಾಲೆ, ಹುಣಸೆರಸ, ಉಪ್ಪು, ಬೆಲ್ಲ, ಕೊಬ್ಬರಿ ಬೆರೆಸಿ ಮಿಶ್ರಣ ಹೊಂದಿಸಿ ಎಣ್ಣೆಯಲ್ಲಿ ಸಾಸಿವೆ, ಕಡಲೆ ಬೀಜ, ಕರಿಬೇವು, ಇಂಗು ಕೊಬ್ಬರಿ, ಒಗ್ಗರಣೆ ತಯಾರಿಸಿ ಮಿಶ್ರಣಕ್ಕೆ ಬೆರೆಸಿ ಹೊಂದಿಸಿ, ರುಚಿಯಾದ ಆರ್ಕ ಬಿಸಿಬೇಳೆ ಬಾತ್ ತಯಾರಿಸಿ.