ಮಕ್ಕಳು ಮನೆಯಲ್ಲಿ ತಿಂಡಿಗಾಗಿ ನಿಮ್ಮನ್ನು ಪೀಡಿಸುತ್ತಿದ್ದರೆ ಸುಲಭವಾಗಿ ಮಾಡುವ ಲಡ್ಡು ಇಲ್ಲಿದೆ ನೋಡಿ. ಇದನ್ನು ಥಟ್ಟಂತ ಮಾಡಿಬಿಡಬಹುದು. ಬೇಕಾಗುವ ಸಾಮಾಗ್ರಿಗಳು ಕೂಡ ಕಡಿಮೆ ಇದೆ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಕೊಬ್ಬರಿ ತುರಿ, ¼ ಕಪ್ – ಕಂಡೆನ್ಸಡ್ ಮಿಲ್ಕ್, ಸಕ್ಕರೆ- ಸ್ವಲ್ಪ, 1.5 ಟೇಬಲ್ ಸ್ಪೂನ್ ರೋಸ್ ವಾಟರ್, ½ ಟೀ ಸ್ಪೂನ್ – ಏಲಕ್ಕಿ ಪುಡಿ, ಚಿಟಿಕೆ – ಕೆಂಪು ಫುಡ್ ಕಲರ್, ತುಪ್ಪ – ಸ್ವಲ್ಪ.
ಮಾಡುವ ವಿಧಾನ:
ಒಂದು ಬೌಲ್ ಗೆ ಕೊಬ್ಬರಿ ತುರಿ, ಕಂಡೆನ್ಸಡ್ ಮಿಲ್ಕ್, ರೋಸ್ ವಾಟರ್, ಫುಡ್ ಕಲರ್, ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಿ. ಇದನ್ನು ಸ್ವಲ್ಪ ತೆಂಗಿನಕಾಯಿ ತುರಿಯಲ್ಲಿ ಹೊರಳಾಡಿಸಿದರೆ ರುಚಿಕರವಾದ ಕೊಕೊನಟ್ ಲಡ್ಡು ಸವಿಯಲು ಸಿದ್ಧ.