ಮಶ್ರೂಮ್ – 250 ಗ್ರಾಂ
ಬೆಳ್ಳುಳ್ಳಿ ಎಸಳು – 4-5
ಶುಂಠಿ – ಸಣ್ಣ ತುಂಡು
ಹಸಿ ಮೆಣಸಿನಕಾಯಿ – 2-3
ಈರುಳ್ಳಿ – 1
ಕರಿಮೆಣಸು – 1 ಟೀ ಸ್ಪೂನ್
ಧನಿಯಾ ಪುಡಿ – 1/2 ಟೀ ಸ್ಪೂನ್
ಗರಂ ಮಸಾಲಾ – 1/4 ಟೀ ಸ್ಪೂನ್
ಕೊತ್ತಂಬರಿ ಎಲೆ – ಕತ್ತರಿಸಿದ್ದು
ಎಣ್ಣೆ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
ಮಶ್ರೂಮ್‌ಗಳನ್ನು ಚೆನ್ನಾಗಿ ತೊಳೆದು, ಸ್ಲೈಸ್ ಮಾಡಿಟ್ಟುಕೊಳ್ಳಿ,
ಮಸಾಲೆ ಪೇಸ್ಟ್ ತಯಾರಿಸಲು ಬೆಳ್ಳುಳ್ಳಿ, ಶುಂಠಿ ಮತ್ತು ಹಸಿ ಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಸ್ವಲ್ಪ ಹೊತ್ತು ಹುರಿಯಿರಿ.
ಈರುಳ್ಳಿಗೆ ಮಶ್ರೂಮ್ ಸೇರಿಸಿ ಚೆನ್ನಾಗಿ ಬೆರೆಸಿ.
ಮಸಾಲೆ ಪೇಸ್ಟ್, ಕರಿಮೆಣಸು, ಧನಿಯಾ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
ಕಡಿಮೆ ಉರಿಯಲ್ಲಿ ಮುಚ್ಚಳ ಮುಚ್ಚಿ 5-7 ನಿಮಿಷಗಳ ಕಾಲ ಬೇಯಿಸಿ.
ಕೊತ್ತಂಬರಿ ಎಲೆ ಸಿಂಪಡಿಸಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ.