ರೊಟ್ಟಿ ಜೊತೆ ಬದನೆಕಾಯಿ ಪಲ್ಯ, ಎಣ್ಣೆಗಾಯಿ ಇದ್ದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಈ ರುಚಿಯಾದ ಬದನೆಕಾಯಿ ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ. ಆರೋಗ್ಯಕ್ಕೂ ಉತ್ತಮ. ಅದು ಹೇಗೆ ಅಂತೀರಾ…?
ಬದನೆಯಲ್ಲಿ ಹೆಚ್ಚಿನ ನಾರಿನಂಶವಿದೆ. ಇದು ದೇಹದಲ್ಲಿನ ಸಕ್ಕರೆಯಂಶ ಕಡಿಮೆ ಮಾಡಿ, ಮಧುಮೇಹ ಸಮಸ್ಯೆಯನ್ನು ಕಂಟ್ರೋಲ್‌ನಲ್ಲಿಡುತ್ತೆ.
ಈ ತರಕಾರಿಯಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟ್‌ಗಳು ಹೃದಯಕ್ಕೆ ಉತ್ತಮ ಕೊಲೆಸ್ಟ್ರಾಲ್ ನೀಡುತ್ತದೆ. ಇದು ಹೃದ್ರೋಗವನ್ನು ದೂರ ಮಾಡುತ್ತದೆ.
ದೇಹದ ತೂಕ ಕಡಿಮೆ ಮಾಡಲು ಉಪಯುಕ್ತ. ಬದನೆಯನ್ನು ಬೇಯಿಸಿ ತಿಂದರೆ ಹೆಚ್ಚಿನ ಲಾಭವಿದೆ.
ಕ್ಯಾನ್ಸರ್ ವಿರುದ್ಧ ಹೊರಾಡುವ ಶಕ್ತಿಯೂ ಬದನೆಯಲ್ಲಿರುವ ಪೆನೋಲಿಕ್‌ಗಿದೆ.
ಬದನೆಯನ್ನು ಚೆನ್ನಾಗಿ ರುಬ್ಬಿ, ಸೋಸಿ ನೀರು ಮಾತ್ರ ಸೇವಿಸಿದರೆ, ರಕ್ತದೊತ್ತಡ ಕಂಟ್ರೋಲ್‌ಗೆ ಬರುತ್ತದೆ.
ಬದನೆಯಲ್ಲಿರುವ ಆಟೋ ಸಯಾನಿಕ್ ಪದಾರ್ಥ ದೇಹದ ನಿಶ್ಯಕ್ತಿಯನ್ನು ದೂರ ಮಾಡಿ, ದೇಹಕ್ಕೆ ಶಕ್ತಿ ನೀಡುತ್ತದೆ. ಇದರಲ್ಲಿನ ನಿಕೋಟಿನ್ ಅಂಶ ಧೂಮಪಾನ ಚಟವನ್ನು ನಿಯಂತ್ರಿಸುತ್ತದೆ. ಅಲ್ಲದೇ ಹೃದಯ, ರಕ್ತನಾಳದ ಸಮಸ್ಯೆಗೂ ಮದ್ದು.
ಬದನೆಯಲ್ಲಿ ವಿಟಮಿನ್ ಸಿ ಅಂಶವಿದ್ದು, ಸೋಂಕಿನ ವಿರುದ್ಧ ಹೋರಾಡುತ್ತದೆ.
ಬದನೆಯನ್ನು ಬೇಯಿಸಿ ಸ್ವಲ್ಪ ಬೆಲ್ಲ ಸೇರಿಸಿ ಬೆಳಗ್ಗೆ ಸೇವಿಸಿದರೆ ಮೂಲವ್ಯಾಧಿ ಸರಿ ಹೋಗುತ್ತದೆ.