BREAKING : ರಾಮನಗರದಲ್ಲಿ ಕುರಿ ಮೈ ತೊಳೆಯಲು ಕೆರೆಗೆ ಇಳಿದ ತಂದೆ-ಮಗ ನೀರುಪಾಲು

ರಾಮನಗರ : ಕುರಿ ಮೈ ತೊಳೆಯಲು ಹೋದ ತಂದೆ-ಮಗ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ರಾಮನಗರದ ಕನಕಪುರ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗ್ರಾಮದ ರಾಜು (50) ಹಾಗೂ ಪುತ್ರ ಪ್ರಸನ್ನ (23) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಕುರಿ ಮೈ ತೊಳೆಯಲು ಇಬ್ಬರು ಹೋಗಿದ್ದರು. ಈ ವೇಳೆ ರಾಜು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ, ತಂದೆಯನ್ನು ಕಾಪಾಡಲು ಹೋದ ಮಗ ಕೂಡ ಮೇಲೆ ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ವಿಷಯ ತಿಳಿಯತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದ ದಳದ ಸಿಬ್ಬಂದಿಗಳು ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read