ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಅನ್ನೋ ಮಾತಿದೆ. ಅಂತೆಯೇ ಅತಿಯಾದ ಉಪ್ಪು ಸೇವನೆ ಕೂಡ ಆರೋಗ್ಯಕ್ಕೆ ಮಾರಕ. ಆದ್ರೆ ಉಪ್ಪಿಲ್ಲದ ಊಟ ಸೇವನೆ ಅಸಾಧ್ಯ ಅನ್ನೋದು ಕೂಡ ಸತ್ಯ.
ಹಾಗಾಗಿ ಉಪ್ಪನ್ನ ಹಿತಮಿತವಾಗಿ ತಿನ್ನೋದು ಹೇಗೆ ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಅತಿಯಾದ ಉಪ್ಪು ಸೇವನೆಯಿಂದ ಪ್ರತಿವರ್ಷ ಜಗತ್ತಿನಲ್ಲಿ 3 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರಂತೆ.
ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸಾಲ್ಟ್ ಶೇಕರ್ ಗಳನ್ನು ಇಟ್ಟಿರ್ತಾರೆ. ಡಯಟ್ ನಲ್ಲಿರೋ ರೋಗಿಗಳು ಕೂಡ ಅದನ್ನು ನೋಡಿದಾಕ್ಷಣ, ಜಾಸ್ತಿ ಉಪ್ಪು ಸೇವಿಸಿಬಿಡ್ತಾರೆ ಅನ್ನೋದು ಸಂಶೋಧಕರ ಆತಂಕ. ಹಾಗಾಗಿ ಸಾಲ್ಟ್ ಶೇಕರ್ ಗಳ ಮೇಲೆ ವಾರ್ನಿಂಗ್ ನೋಟ್ ಇರಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಅತಿಯಾಗಿ ಉಪ್ಪು ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಹೃದಯ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಉಪ್ಪು ಬಳಕೆ ಹೆಚ್ಚಾದಂತೆಲ್ಲಾ ನಮ್ಮ ಆಯಸ್ಸು ಕಡಿಮೆಯಾಗುತ್ತ ಹೋಗುತ್ತದೆ. ಆದ್ರೆ ನಮಗೆ ಅದರ ಅರಿವೇ ಇಲ್ಲ.