ಮಾರುಕಟ್ಟೆಯಲ್ಲಿ ದುಬಾರಿ ಹಣ ತೆತ್ತು ತಂದ ಮುಳ್ಳುಸೌತೆ ಕಹಿಯಾಗಿದ್ದಾಗ ಬಹಳ ಬೇಸರವಾಗುತ್ತದೆ. ಹೀಗಾದಾಗ ನೇರವಾಗಿ ಮುಳ್ಳುಸೌತೆಯನ್ನು ಎಸೆಯದಿರಿ.
ಮೊದಲು ಅದರ ತಲೆ ಹಾಗೂ ಬುಡದ ಒಂದಿಂಚು ಭಾಗವನ್ನು ಕತ್ತರಿಸಿ ಪ್ರತ್ಯೇಕಿಸಿ. ಮುಳ್ಳುಸೌತೆಯ ಮಧ್ಯದ ಬೀಜವಿರುವ ಭಾಗವನ್ನು ತೆಗೆಯಿರಿ. ಬಳಿಕ ಬಳಸಿ ನೋಡಿ. ಇದರಿಂದ ಹೆಚ್ಚಿನ ಕಹಿಯ ಅಂಶ ದೂರವಾಗುತ್ತದೆ. ಅಂದರೆ ಹೆಚ್ಚಾಗಿ ತಲೆ ಹಾಗೂ ಬುಡದ ಭಾಗವೇ ಕಹಿ ಇರುತ್ತದೆ. ಉಳಿದಂತೆ ಮದ್ಯಭಾಗ ರುಚಿಕರವಾಗಿರುತ್ತದೆ.
ಮುಳ್ಳುಸೌತೆಯನ್ನು ಕತ್ತರಿಸಿ ಚಿಟಿಕೆ ಉಪ್ಪು ಉದುರಿಸುವುದರಿಂದ ಕಹಿ ಕಡಿಮೆಯಾಗುತ್ತದೆ. ಸಣ್ಣದಾಗಿ ಹೆಚ್ಚಿಕೊಂಡ ಭಾಗವನ್ನು ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಹಾಕಿ. ಇದರಿಂದಲೂ ಕಹಿ ದೂರವಾಗುತ್ತದೆ.
ಸೌತೆಕಾಯಿ ತುದಿಗಳನ್ನು ಕತ್ತರಿಸಿ ಸಿಪ್ಪೆ ತೆಗೆಯಿರಿ. ಅಲ್ಲಲ್ಲಿ ಫೋರ್ಕ್ ನಿಂದ ಚುಚ್ಚಿ. ಅರ್ಧ ಗಂಟೆ ಹೊತ್ತು ಹಾಗೇ ಬಿಡಿ. ಎರಡರಿಂದ ಮೂರು ಬಾರಿ ಹೀಗೆ ಮಾಡುವುದರಿಂದ ಅದರ ಕಹಿಯ ಪ್ರಮಾಣ ಕಡಿಮೆಯಾಗುತ್ತದೆ.