alex Certify 2021-22 ನೇ ಸಾಲಿನಿಂದ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡ ಅಧಿಕಾರಿ/ನೌಕರರಿಗೆ ಇಲ್ಲಿದೆ ಮಹತ್ವದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2021-22 ನೇ ಸಾಲಿನಿಂದ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡ ಅಧಿಕಾರಿ/ನೌಕರರಿಗೆ ಇಲ್ಲಿದೆ ಮಹತ್ವದ

ಬೆಂಗಳೂರು : 2021-22 ನೇ ಸಾಲಿನಿಂದ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡ ಅಧಿಕಾರಿ/ನೌಕರರ ಸೇವಾ ವಹಿಯನ್ನು Electronic service Register (ESR) ನಲ್ಲಿಯೇ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2021-22ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯನ್ನು “ವಿದ್ಯುನ್ಮಾನ ಸೇವಾ ವಹಿ” (Electronic Service Register (ESR) ನಲ್ಲಿಯೇ ಅನುಷ್ಠಾನಗೊಳಿಸಲು ಸಂಬಂಧ ಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಲಾಗಿರುತ್ತದೆ. ಹಾಗೂ ಉಲ್ಲೇಖಿತ ಸರ್ಕಾರದ ಸುತ್ತೋಲೆ (3) & (4) ರಂತೆ, ಎಲ್ಲಾ ಸಿಬ್ಬಂದಿಗಳ ಸೇವಾ ವಹಿಗಳನ್ನು ESR ಗೆ ಬದಲಾಯಿಸಿ ಮುಂದೆ ESR ನಲ್ಲಿಯೇ ಮುಂದುವರೆಸುವಂತೆ ತಿಳಿಸಲಾಗಿದೆ ಹಾಗೂ ಹೆಚ್‌ಆರ್‌ಎಂಎಸ್-1 ತಂತ್ರಾಂಶದ ಸೇವಾವಹಿ ಭಾಗದಲ್ಲಿ ಅಧಿಕಾರಿ/ನೌಕರರ ಮಾಹಿತಿಯು ಲಭ್ಯವಿದ್ದು, ಸದರಿ ಮಾಹಿತಿಯನ್ನು ಹೆಚ್‌ಆರ್‌ಎಂಎಸ್-2 ಯೋಜನೆಯ ಭಾಗವಾಗಿರುವ ವಿದ್ಯುನ್ಮಾನ ಸೇವಾ ವಹಿ (ESR) ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ಮಾಹಿತಿಯನ್ನು ವರ್ಗಾಯಿಸಿದ ನಂತರ ESR ನಲ್ಲಿ ಯಾವುದೇ ತಿದ್ದುಪಡಿ ಮಾಡುವ ಅವಕಾಶವಿಲ್ಲದಿರುವ ಕಾರಣ ಹೆಚ್‌ಆರ್‌ಎಂಎಸ್-1 ತಂತ್ರಾಂಶದಲ್ಲಿ ಲಭ್ಯವಿರುವ ತಮ್ಮ ಇಲಾಖೆಯ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರುಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ಕೂಡಲೇ ಪರಿಶೀಲಿಸಿ, ಅವಶ್ಯಕವಿದ್ದಲ್ಲಿ ಸರಿಪಡಿಸುವಂತೆ ಹಾಗೂ ಸೇರಿಸಲು ಸೂಚಿಸಲಾಗಿದೆ.

ಆದುದರಿಂದ, ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಹೆಚ್ಚಿನ ಗಮನ ಹರಿಸಿ, ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ನೌಕರರುಗಳ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿಯಲ್ಲಿಯೇ ಅನುಷ್ಠಾನಗೊಳಿಸುವಂತೆ ಈ ಮೂಲಕ ಮತ್ತೋಮ್ಮೆ ಕೋರಿದೆ. ಹಾಗೂ ಸಿಬ್ಬಂದಿಗಳ ಇಎಸ್‌ಆರ್ ನಿರ್ವಹಣೆಯಲ್ಲಿ ಯಾವುದೇ ಅಡಚಣೆಯುಂಟಾಗಿದ್ದಲ್ಲಿ ಕೂಡಲೇ ಹೆಚ್‌ಆರ್‌ಎಂಎಸ್ ತಂಡವನ್ನು ಈ ಇ-ಮೇಲ್  admin@karnataka.gov.in ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...