ಕಣ್ಣಿನ ಸುತ್ತ ಮೂಡುವ ಕಪ್ಪು ವರ್ತುಲ ನಿಮ್ಮ ವಯಸ್ಸನ್ನು ದುಪ್ಪಟ್ಟು ಏರಿಸುತ್ತದೆ. ಕೆಲವೊಮ್ಮೆ ವಿಪರೀತ ಸುಸ್ತು, ನಿದ್ರಾಹೀನತೆ ಒತ್ತಡದಿಂದಲೂ ಕಣ್ಣಿನ ಕೆಳಗಿನ ಕಪ್ಪು ವರ್ತುಲ ಮತ್ತಷ್ಟು ಗಾಢವಾದೀತು. ಅದನ್ನು ಹೋಗಲಾಡಿಸುವುದು ಹೇಗೆಂದು ನೋಡೋಣ.
ಮುಳ್ಳುಸೌತೆಯನ್ನು ಸ್ವಚ್ಛವಾಗಿ ತೊಳೆದು ತೆಳ್ಳಗೆ ರೌಂಡ್ ಆಕಾರಕ್ಕೆ ಕತ್ತರಿಸಿಕೊಳ್ಳಿ. ಅದನ್ನು ಹತ್ತು ನಿಮಿಷ ಫ್ರಿಡ್ಜ್ ನಲ್ಲಿಡಿ. ಅಲೋವೇರಾ ಜೆಲ್ ಗೆ ರೋಸ್ ವಾಟರ್ ಹಾಕಿ ಚೆನ್ನಾಗಿ ಕದಡಿ. ಇದರ ಪೇಸ್ಟ್ ಅನ್ನು ಸಿದ್ಧಪಡಿಸಿಕೊಳ್ಳಿ.
ಈಗ ಫ್ರಿಡ್ಜ್ ನಲ್ಲಿಟ್ಟ ಮುಳ್ಳುಸೌತೆಯನ್ನು ಕಣ್ಣ ಮೇಲಿಟ್ಟು ಹತ್ತು ನಿಮಿಷ ವಿಶ್ರಾಂತಿ ಪಡೆಯಿರಿ. ಅದನ್ನು ತೆಗೆದ ಬಳಿಕ ಅಲೋವೇರಾ ರೋಸ್ ವಾಟರ್ ಮಿಶ್ರಣವನ್ನು ಕಣ್ಣಿನ ತಳಭಾಗಕ್ಕೆ ಹಚ್ಚಿ ಇಪ್ಪತ್ತು ನಿಮಿಷ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಇದರಿಂದ ಕಣ್ಣ ಸುತ್ತಲಿನ ವರ್ತುಲ, ನೆರಿಗೆ ಮಾಯವಾಗುವುದಲ್ಲದೆ ಕಣ್ಣುಗಳಿಗೆ ಅರಾಮ ದೊರೆಯುತ್ತದೆ.
ಸೌತೆಕಾಯಿಯಲ್ಲಿರುವ ನೀರಿನಾಂಶ ಕಣ್ಣಿನ ಅರೋಗ್ಯವನ್ನು ಕಾಪಾಡುವುದರ ಜೊತೆ ಕಣ್ಣಿಗೆ ತಂಪು ಒದಗಿಸುತ್ತದೆ. ಅಲೋವೇರಾದಲ್ಲಿರುವ ಔಷಧೀಯ ಗುಣ ಕಣ್ಣಿನ ಸುತ್ತಲಿನ ರಕ್ತ ಸಂಚಾರಕ್ಕೆ ಸಹಾಯವಾಗುತ್ತದೆ. ಇದನ್ನು ಎರಡು ದಿನಕ್ಕೊಮ್ಮೆ ಮಾಡುವುದರಿಂದ ಅತ್ಯುತ್ತಮ ಫಲಿತಾಂಶ ಪಡೆಯಬಹುದು.