ಜೇನುತುಪ್ಪದ ಸೇವನೆ ಕಣ್ಣಿಗೆ ಹಿತ ಮತ್ತು ಬುದ್ಧಿ ಶಕ್ತಿ ವೃದ್ಧಿಯಾಗುತ್ತದೆ.
ರಾತ್ರಿ ಮಲಗುವಾಗ ಮೂರು ಚಮಚೆಯಷ್ಟು ಜೇನುತುಪ್ಪ ಸೇವಿಸುವುದರಿಂದ ಬಹುಮೂತ್ರ ರೋಗ ಕಡಿಮೆಯಾಗುತ್ತದೆ.
ದಪ್ಪಗಿರುವವರು ಪ್ರತಿ ದಿನ ರಾತ್ರಿ ನಾಲ್ಕು ಟೀ ಚಮಚ, ಹಳೆಯದಾದ ಜೇನುತುಪ್ಪ ಸೇವಿಸಿದರೆ ಶರೀರದ ತೂಕ ಕಡಿಮೆಯಾಗುತ್ತದೆ.
ತುಳಸಿ ರಸ, ಜೇನುತುಪ್ಪ ಮತ್ತು ದೊಡ್ಡಪತ್ರೆ ಎಲೆಯ ರಸವನ್ನು ಬೆರೆಸಿ ಮಕ್ಕಳಿಗೆ ನೀಡುವುದರಿಂದ ಕೆಮ್ಮು, ಜ್ವರ ನಿವಾರಣೆಯಾಗುತ್ತದೆ.
ವೀಳ್ಯದೆಲೆ, ದೊಡ್ಡಪತ್ರೆ ಎಲೆಗಳು ಬೆಂಕಿಯಲ್ಲಿ ಬಾಡಿಸಿ ಅದರ ರಸದೊಂದಿಗೆ ಜೇನುತುಪ್ಪ ಸೇರಿಸಿ ನೀಡುವುದರಿಂದ ಕೆಮ್ಮು ಗುಣವಾಗುತ್ತದೆ.
ಹಾಲಿನೊಂದಿಗೆ ಜೇನುತುಪ್ಪ ಸೇರಿಸಿ ಕುಡಿದರೆ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.
ಸುಟ್ಟ ಗಾಯಕ್ಕೆ ಜೇನುತುಪ್ಪ ಲೇಪಿಸಿದರೆ ಉರಿ ಕಡಿಮೆಯಾಗುತ್ತದೆ.
ಸುಣ್ಣ ಮತ್ತು ಜೇನುತುಪ್ಪ ಸೇರಿಸಿ ಊತದ ಭಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗಿ ಊತ ಇಳಿಯುತ್ತದೆ.
ಬಾಯಲ್ಲಿ ಹುಣ್ಣಾದರೆ ಎರಡು ದಿನಗಳ ತನಕ ಜೇನುತುಪ್ಪ ಹಚ್ಚಿದರೆ ಹುಣ್ಣು ಕಡಿಮೆಯಾಗುತ್ತದೆ.