ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಸರ್ಕಾರ ಹಣ ನೀಡುತ್ತಿದ್ದು, ಕೆಲವರ ಖಾತೆಗೆ ಹಣ ಬಂದಿಲ್ಲ. ಇನ್ನೂ ಕೆಲವರ ಖಾತೆಗೆ ಹಣ ಜಮಾ ಆಗಿದೆ. ಹಾಗೆಯೇ ‘ಗೃಹಲಕ್ಷ್ಮಿ’ ಯೋಜನೆಯಡಿ ಸರ್ಕಾರ 3 ಸಾವಿರ ಹಣ ನೀಡುತ್ತಿದ್ದು, ಇನ್ನೂ ಕೆಲವು ಯಜಮಾನಿಯರ ಖಾತೆಗೆ ಹಣ ಬಂದಿಲ್ಲ ಅದಕ್ಕೆ ನೀವು ತಪ್ಪದೇ ಈ ಕೆಲಸಗಳನ್ನು ಮಾಡಬೇಕು. ಇಲ್ಲದಿದ್ದರೆ ನಿಮಗೆ ಹಣ ಬರಲ್ಲ.
ಅನ್ನಭಾಗ್ಯ ಯೋಜನೆಯ ಮೂಲಕ ಕುಟುಂಬದಲ್ಲಿರುವ ಪ್ರತಿ ಸದಸ್ಯನಿಗೆ 170ರೂ. ನಂತೆ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ಹೋಗುತ್ತಿದೆ. ಈಗಾಗಲೇ ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಕೂಡ ವರ್ಗಾವಣೆ ಆಗಿದೆ. ಆದರೆ ಕೆಲವರಿಗೆ ಇನ್ನೂ ಕೂಡ ಹಣ ಬಂದಿಲ್ಲ.
ಏನು ಮಾಡಬೇಕು..?
1) DBT ಮೂಲಕ ಹಣ ವರ್ಗಾವಣೆ ಆಗುವುದರಿಂದ ನಿಮ್ಮ ಬ್ಯಾಂಕ್ ಖಾತೆ ಗೆ ಆಧಾರ್ ಕಾರ್ಡ್ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಆಗಿರಬೇಕು. ಒಂದು ವೇಳೆ ಆಗಿಲ್ಲ ಅಂದರೆ ತಪ್ಪದೇ ಮಾಡಿಸಬೇಕು.
2)ಮುಖ್ಯವಾದ ವಿಚಾರ ಅಂದರೆ ನಿಮ್ಮ ಬ್ಯಾಂಕ್ ಖಾತೆ ಹೆಸರು, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಈ ಎಲ್ಲಾ ದಾಖಲೆಗಳಲ್ಲೂ ಕೂಡ ನಿಮ್ಮ ಹೆಸರು ಸರಿಯಾಗಿದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು. ಒಂದು ವೇಳೆ ಏನಾದರೂ ಹೆಸರಿನಲ್ಲಿ ವ್ಯತ್ಯಾಸ, ದೋಷವಿದ್ರೆ ಹಣ ಬರಲ್ಲ. ಆದ್ದರಿಂದ ಇದನ್ನು ನೀವು ಸರಿಪಡಿಸಿಕೊಳ್ಳಬೇಕು.
3) ಹಾಗೆಯೇ ನಿಮ್ಮ ಆಧಾರ್ ಲಿಂಕ್ ಆದ ಬ್ಯಾಂಕ್ ಖಾತೆ ಆಕ್ಟಿವ್ ಆಗಿದೆಯೇ ಎನ್ನುವುದನ್ನು ನೀವು ಚೆಕ್ ಮಾಡಿಕೊಳ್ಳಬೇಕು. ಒಂದು ವೇಳೆ ಆ ಖಾತೆ Inactive ಆಗಿದ್ರೆ ಅದಕ್ಕೆ ಹಣ ಹಾಕಿ ಅದನ್ನು ಸಕ್ರಿಯ ಮಾಡಿಕೊಳ್ಳಿ. ಖಾತೆ ಸಕ್ರಿಯವಾಗಿಲ್ಲದಿದ್ದರೆ ಹಣ ಹಾಕುವುದಕ್ಕೆ ಸಮಸ್ಯೆ ಆಗುತ್ತದೆ.
ಇನ್ನೂ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಹಣ ಜಮೆಯಾಗದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಎಲ್ಲಾ ಫಲಾನುಭವಿಗಳಿಗೂ ಹಣ ಜಮೆ ಆಗಲಿದೆ ಎಂದು ತಿಳಿಸಿದ್ದಾರೆ. ಕೆಲವರ ಬ್ಯಾಂಕ್ ಖಾತೆಗಳಲ್ಲಿ ಸಮಸ್ಯೆಯಾಗಿ ಹಣ ಜಮಾ ಆಗುತ್ತಿಲ್ಲ. 8 ಲಕ್ಷ ಜನರ ಅಕೌಂಟ್ ನಂಬರ್ ನಲ್ಲಿ ಸಮಸ್ಯೆಯಾಗಿದ್ದು, ಹಣ ಜಮಾ ಆಗುತ್ತಿಲ್ಲ. ಹಣ ಜಮಾ ಆಗದ ಫಲಾನುಭವಿಗಳನ್ನು ಗುರುತಿಸುವ ಕೆಲಸ ಮಾಡುತ್ತೇವೆ ಎಂದು ಕೂಡ ಹೇಳಿದ್ದಾರೆ.