ಹಾರ್ವರ್ಡ್ ಸ್ಕೂಲ್ನ ವಿಜ್ಞಾನಿಗಳು ವಯಸ್ಸಾಗುವಿಕೆಯನ್ನು ನಿಲ್ಲಿಸುವಂತಹ ಮಾತ್ರೆಯೊಂದನ್ನು ಕಂಡು ಹಿಡಿದಿದ್ದಾರೆ. ಕೆಮಿಕಲಿ ಇಂಡ್ಯೂಸ್ಡ್ ರಿಪ್ರೋಗ್ರಾಮಿಂಗ್ ಟು ರಿವರ್ಸ್ ಸೆಲ್ಯೂಲಾರ್ ಏಜಿಂಗ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಸಂಶೋಧಕರ ಅಧ್ಯಯನವನ್ನು ಜುಲೈ 12ರಂದು ಏರ್ಜಿಂಗ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಈ ರಾಸಾಯನಿಕ ಕಾಕ್ಟೇಲ್ನಲ್ಲಿ ಏಳು ಏಜೆಂಟ್ಗಳು ಇರುತ್ತದೆ. ಇವುಗಳಲ್ಲಿ ಹಲವು ಇತರೆ ದೈಹಿಕ ಹಾಗೂ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡುತ್ತದೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ತಂಡವು ವಯಸ್ಸನ್ನು ಹಿಮ್ಮೆಟ್ಟಿಸಲು ಮಾನವ ಜೀವಕೋಶಗಳನ್ನು ಪುನರುಜ್ಜೀವನಗೊಳಿಸಲು ಮೂರು ವರ್ಷಗಳ ಕಾಲ ಸಂಶೋಧನೆ ನಡೆದಿದೆ ಎಂದು ಹೇಳಿದೆ.
ಆಪ್ಟಿಕ್ ನರ, ಮೆದುಳಿನ ಅಂಗಾಂಶ, ಮೂತ್ರಪಿಂಡ ಮತ್ತು ಸ್ನಾಯುಗಳ ಮೇಲಿನ ಅಧ್ಯಯನಗಳು ಇಲಿಗಳಲ್ಲಿ ಸುಧಾರಿತ ದೃಷ್ಟಿ ಮತ್ತು ವಿಸ್ತೃತ ಜೀವಿತಾವಧಿಯೊಂದಿಗೆ ಭರವಸೆಯ ಫಲಿತಾಂಶಗಳನ್ನು ತೋರಿಸಿವೆ ಮತ್ತು ಇತ್ತೀಚೆಗೆ, ಈ ವರ್ಷದ ಏಪ್ರಿಲ್‌ನಲ್ಲಿ, ಮಂಗಗಳಲ್ಲಿ ದೃಷ್ಟಿ ಸುಧಾರಿಸಿದೆ ಎಂದು ಸಂಶೋಧಕರು ಟ್ವೀಟ್ ಮಾಡಿದ್ದಾರೆ.
ಈ ರಾಸಾಯನಿಕ ಕಾಕ್ ಟೇಲ್ನ್ನು ಮಾನವರ ಮೇಲೆ ಕ್ಲಿನಿಕಲ್ ಪ್ರಯೋಗ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಈ ಅಧ್ಯಯನ ಆರಂಭಿಸಲಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದರು.
https://twitter.com/davidasinclair/status/1679178670743732249