alex Certify Gruha Lakshmi Scheme : ಯಜಮಾನಿಯರೇ ಗಮನಿಸಿ : ‘ಗೃಹಲಕ್ಷ್ಮಿ’ಗೆ ಅರ್ಜಿ ಸಲ್ಲಿಸುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Gruha Lakshmi Scheme : ಯಜಮಾನಿಯರೇ ಗಮನಿಸಿ : ‘ಗೃಹಲಕ್ಷ್ಮಿ’ಗೆ ಅರ್ಜಿ ಸಲ್ಲಿಸುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ

ಬೆಂಗಳೂರು : ‘ಗೃಹಲಕ್ಷ್ಮಿ’ ಯೋಜನೆ ನೋಂದಣಿಗೆ ನಿನ್ನೆ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಕೆಗೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ಗೃಹಲಕ್ಷ್ಮೀ ಯೋಜನೆ ಆಗಸ್ಟ್ 16 ರಿಂದ ಜಾರಿಯಾಗಲಿದೆ. ರಾಜ್ಯದ 1.28 ಕೋಟಿ ಮಹಿಳೆಯರು ಇದರ ಲಾಭ ಪಡೆಯಲಿದ್ದಾರೆ. ಯೋಜನೆಗಾಗಿ ವಾರ್ಷಿಕ 36 ಸಾವಿರ ಕೋಟಿ ರೂ. ಖರ್ಚಾಗಲಿದೆ ಎಂದರು.
ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳನ್ನು ಹಾಗೂ ನಗರ ಪ್ರದೇಶಗಳಲ್ಲಿ ಕರ್ನಾಟಕ ಒನ್ ಮತ್ತು ಗೃಹಲಕ್ಷ್ಮೀ ಯೋಜನೆ ನೊಂದಣಿ ಸೇವಾ ಕೇಂದ್ರಗಳನ್ನಾಗಿ ಗುರುತಿಸಲಾಗಿದ್ದು, ಸದರಿ ಕೇಂದ್ರಗಳಿಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ಕೇಂದ್ರದಲ್ಲಿ ಯಾವುದೇ ಸೇವಾ ಶುಲ್ಕ ನೀಡಬೇಕಿಲ್ಲ. ಇನ್ನು ಅರ್ಜಿ ಸಲ್ಲಿಕೆಗೆ ಯಾವುದೇ ಕಾಲಮಿತಿ ಇಲ್ಲ.

ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ

1. ಗೃಹ ಲಕ್ಷ್ಮಿ ಯೋಜನೆ ಎಂದರೇನು?
ಉತ್ತರ : “ಗೃಹಲಕ್ಷ್ಮಿ ಯೋಜನ” ಕರ್ನಾಟಕ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಪಡಿತರ ಕಾರ್ಡ್ ಹೊಂದಿದ ಕುಟುಂಬದ ಯಜಮಾನಿಗೆ ಮಾಸಿಕ ರೂ. 2000/- ಹಣ ವಿತರಣೆ ಮಾಡಲಾಗುತ್ತದೆ.

2. ನಾನು ಈ ಯೋಜನೆಗೆ ಅರ್ಹಳೇ?
ಉತ್ತರ :ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿದ ಮಹಿಳೆ ಅರ್ಹಳು.

3. ಮನೆಯ ಯಜಮಾನಿ ಯಾರು?
ಉತ್ತರ :ರೇಷನ್ ಕಾರ್ಡ್’ನಲ್ಲಿ ನಮೂದಿಸಿರುವ ಮನೆಯ ಯಜಮಾನಿಯನ್ನೇ ‘ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಎಂದು ಪರಿಗಣಿಸಲಾಗುತ್ತದೆ.

4. ಪಡಿತರ ಚೀಟಿಯಲ್ಲಿ ಅತ್ತೆ ಯಾಜಮಾನಿಯಾಗಿದ್ದು, ಸದಸ್ಯರ ಪಟ್ಟಿಯಲ್ಲಿ ಸೊಸೆಯ ಹೆಸರಿದ್ದು, ಸೊಸೆಯನ್ನೇ ಫಲಾನುಭವಿಯನ್ನಾಗಿಸುವ ಸೌಲಭ್ಯವಿದೆಯೇ?
ಉತ್ತರ :ಇಲ್ಲ. ಪಡಿತರ ಚೀಟಿಯಲ್ಲಿಯ ಯಜಮಾನಿಯ ಈ ಯೋಜನೆಯ
ಫಲಾನುಭವಿಯಾಗಿರುತ್ತಾರೆ.

5. ಕುಟುಂಬದ ಯಜಮಾನಿಯು ಇತ್ತೀಚೆಗೆ ನಿಧನರಾದರೆ, ಈ ಸನ್ನಿವೇಶದಲ್ಲಿ ಏನು ಮಾಡಬಹುದು?
ಉತ್ತರ : ಪಡಿತರ ಚೀಟಿಯಲ್ಲಿ ಅಗತ್ಯ ತಿದ್ದುಪಡಿಯಾದ ನಂತರ ನೊಂದಾಯಿಸಬಹುದು.

6. ಕುಟುಂಬದ ಯಜಮಾನಿಯು ಮರಣ ಹೊಂದಿದ್ದಲ್ಲಿ ಮುಂದಿನ ಕ್ರಮವೇನು?
ಉತ್ತರ : ಕುಟುಂಬದ ಯಜಮಾನಿಯು ಮರಣ ಹೊಂದಿದಲ್ಲಿ ಯೋಜನೆಯ ಸೌಲಭ್ಯ
ಸ್ಥಗಿತಗೊಳಿಸಲಾಗುವುದು.

7. ಕುಟುಂಬದ ಮುಖ್ಯಸ್ಮರು ಮೃತ ಪಟ್ಟರು ಸಹ ಪಡಿತರ ಚೀಟಿಯಿಂದ ಅವರ ಹೆಸರನ್ನು ತೆಗೆಯದಿರುವ ಪಡಿತರ ಚೀಟಿಗಳನ್ನು ಪರಿಗಣಿಸಲಾಗುತ್ತದೆಯೇ?
ಉತ್ತರ : ನಿಮ್ಮ ಸಮೀಪದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಛೇರಿಯನ್ನು
ಸಂಪರ್ಕಿಸುವುದು.

8. ಈ ಯೋಜನೆಗೆ ನೋಂದಾಯಿಸುವುದು ಹೇಗೇ?
ಉತ್ತರ : ಅ) ಈ ಯೋಜನೆಯನ್ನು ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಿಬಿಎಂಪಿ ವಾರ್ಡ್ ಕಛೇರಿ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಯ ಕಛೇರಿಗಳ ಮೂಲಕ ಉಚಿತವಾಗಿ ನೋಂದಾಯಿಸಬಹುದು. ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕವಾದ ಪ್ರಜಾ ಪ್ರತಿನಿಧಿಗಳು ಮನಮನೆಗೆ ತರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ.

9. ಈ ಯೋಜನೆಯ ಪುಯೋಜನವನ್ನು ಸೇವಾ ಕೇಂದ್ರಗಳಿಗೆ ಹೋಗದೇ ಪಡೆಯಬಹುದೇ?
ಉತ್ತರ : ಹೌದು, ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕಗೊಂಡ ಪ್ರಜಾಪ್ರತಿನಿಧಿಗಳು ಮನೆಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಿದ್ದಾರೆ.

10. ಈ ಯೋಜನೆ ಪಡೆಯಲು ಯಾವ ದಾಖಲೆಗಳನ್ನು ಸಲ್ಲಿಸಬೇಕು?
ಉತ್ತರ : ರೇಷನ್ ಕಾರ್ಡ್ ಪ್ರತಿ ಯಜಮಾನಿ ಮತ್ತು ಆಕೆಯ ಪತಿಯ ಆಧಾರ್ ಕಾರ್ಡ್ ಪ್ರತಿ ಮತ್ತು ಯೋಜನೆಯ ನಗದು ಸೌಲಭ್ಯ ಪಡೆಯಲು ಇಚ್ಚಿಸುವ ಬ್ಯಾಂಕ್ ಖಾತೆಯ ಪಾಸ್ ಬುಕ್ ಪ್ರತಿ ಅಗತ್ಯವಿದೆ.

11. ಯೋಜನೆಗೆ ನೋಂದಾಯಿಸುವಾಗ ಶುಲ್ಕ ಪಾವತಿಸಬೇಕೆ?
ಉತ್ತರ ಈ ಯೋಜನೆಯ ನೋಂದಣಿ ಸಂಪೂರ್ಣ ಉಚಿತ. (ಯಾವುದೇ ಕಾರಣಕ್ಕೂ ಯಾರಿಗೂ ಹಣ ನೀಡಬೇಡಿ)

12. ಈ ಯೋಜನೆಗೆ ನೋಂದಾಯಿಸಲು ಕೊನೆಯ ದಿನಾಂಕ ಯಾವಾಗ?

ಉತ್ತರ : ಈ ಯೋಜನೆಗೆ ಯಾವುದೇ ಕೊನೆಯ ದಿನಾಂಕದ ಮಿತಿಯಿಲ್ಲ, ಯಾವುದೇ ಸಮಯದಲ್ಲಿ ಬೇಕಿದ್ದರೂ ನೋಂದಾಯಿಸಬಹುದು.

13. ಈ ಯೋಜನೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ?
ಉತ್ತರ : ಜುಲೈ 19 ರಂದು ಚಾಲನೆ ನೀಡಲಾಗುವುದು. ಆಗಸ್ಟ್ 15 ರ ನಂತರ ಫಲಾನುಭವಿಗಳು ಮೊದಲ ಹಣಕಾಸು ನೆರವು ರೂ. 2000/- ಪಡೆಯಲಿದ್ದಾರೆ.

14. ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವವರು ಅರ್ಹರೇ?
ಉತ್ತರ : ಇಲ್ಲ, ಸದ್ಯದ ಮಾರ್ಗಸೂಚಿ ಪ್ರಕಾರ ಅರ್ಜಿ ಸಲ್ಲಿಸಿ ಕಾಯುತ್ತಿರುವವರು ಅರ್ಹರಲ್ಲ,

15. ಕುಟುಂಬದ ಮುಖ್ಯಸ್ಮರಿಗಾಗಿ ನಾವು ಈಗ ರೇಷನ್ ಕಾರ್ಡ್ ನಲ್ಲಿ ಬದಲಾವಣೆಗಳನ್ನು
ಮಾಡಬಹುದೇ.
ಉತ್ತರ : (ಉದಾ: ಪತಿ ಕುಟುಂಬದ ಮುಖ್ಯಸ್ಮ) ನಿಮ್ಮ ಸಮೀಪದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಛೇರಿಯನ್ನು ಸಂಪರ್ಕಿಸುವುದು.

16. ನೋಂದಣಿ ನಂತರ ನಾನು ಯಾವುದೇ ಕೃತಿಯನ್ನು ಪಡೆಯಬಹುದೇ?
ಉತ್ತರ : ಹೌದು, ನೋಂದಣಿ ಸಮಯದಲ್ಲಿ ಮೆಸೇಜ್/ಎಸ್.ಎಂ.ಎಸ್ ಅನ್ನು ಫಲಾನುಭವಿಗಳಿಗೆ
ನೀಡಲಾಗುತ್ತದೆ.

17. ಫಲಾನುಭವಿಗಳಿಗೆ ಹಣ ಹೇಗೆ ತಲುಪುತ್ತದೆ?
ಉತ್ತರ : ಅರ್ಹ ಕುಟುಂಬದ ಯಜಮಾನಿಯ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಅಥವಾ ಆಧಾರ್ ಲಿಂಕ್ ಆಗದಿರುವ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ (RTGS) ಮೂಲಕ ಮಾಸಿಕ ರೂ. 2000/- ವಿತರಿಸಲಾಗುತ್ತದೆ.

18. ಕುಟುಂಬದ ಯಜಮಾನಿ ಬೇರೆ ಸದಸ್ಯರ ಬ್ಯಾಂಕ್ ಖಾತೆ ನೀಡಬಹುದಾ?

ಉತ್ತರ : ಇಲ್ಲ. ಕುಟುಂಬದ ಯಜಮಾನಿ ತಮ್ಮದೇ ಬ್ಯಾಂಕ್ ಖಾತೆಯನ್ನು ನೀಡಬೇಕು.

19.ಗಂಡ ಮತ್ತು ಹೆಂಡತಿ ಜಂಟಿ ಖಾತೆಯನ್ನು ಹೊಂದಿದ್ದರೆ, ಜಂಟಿ ಖಾತೆ ವಿವರಗಳನ್ನು
ನೊಂದಾಯಿಸಲು ಒದಗಿಸಬಹುದೇ?
ಉತ್ತರ : ಇಲ್ಲ, ಯೋಜನೆಯಡಿ ನೊಂದಾಯಿಸಿಕೊಳ್ಳುವವರು ಹೊಸ ಬ್ಯಾಂಕ್ ಖಾತೆಯನ್ನು ತೆರೆದು ಪಾಸ್ ಪುಸ್ತಕದ ಪ್ರತಿಯನ್ನು ಒದಗಿಸಬೇಕು.

20. ನಾನು ರಾಷ್ಟ್ರೀಕೃತ / ಷೆಡ್ಯೂಲ್ಡ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದೇನೆ, ನಾನು ಗ್ರಹಲಕ್ಷ್ಮಿ ಯೋಜನೆಗೆ ಖಾತೆಯನ್ನು ಬಳಸಬಹುದೇ?
ಉತ್ತರ : ಹೌದು, ಬಳಸಬಹುದು.

21. ಮಗ/ಮಗಳು ತೆರಿಗೆ ಪಾವತಿದಾರನಾಗಿದ್ದರೆ ಅಥವಾ ಐಟಿ ರಿಟರ್ನ್ಸ್ ಸಲ್ಲಿಸಿದ್ದರೆ, ತಾಯಿ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗುತ್ತಾರೆಯೇ?
ಉತ್ತರ : ಹೌದು ಅರ್ಹರಾಗುತ್ತಾರೆ.

22. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ ಏನು ಮಾಡಲಾಗುವುದು?
ಉತ್ತರ : ಈಗಾಗಲೇ ಪಾವತಿಸಲಾಗಿರುವ ಹಣವನ್ನು ಫಲಾನುಭವಿಗಳಿಂದ ವಸೂಲು ಮಾಡಲಾಗುವುದು ಮತ್ತು ಅಂತಹವರ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

23.ಆಧಾರ್ ಮತ್ತು ಪಡಿತರ ಚೀಟಿಯಲ್ಲಿ ಹೆಸರು/ವಿಳಾಸ ಹೊಂದಿಕೆಯಾಗದಿದ್ದರೆ ಅಂತಹವರನ್ನು ನೊಂದಣಿ ಮಾಡಿಕೊಳ್ಳಲಾಗುತ್ತದೆಯೇ? ಪ್ರಕ್ರಿಯೆಗೊಳಿಸಲಾಗುತ್ತದೆಯೇ?
ಉತ್ತರ : ನೊಂದಣಿ ಈಗಾಗಲೇ ಆಧಾರ್ ಮತ್ತು ಪಡಿತರ ಚೀಟಿ ಜೋಡಣೆಯಾಗಿರುವುದರಿಂದ ಈ ಪ್ರಶ್ನೆ
ಉದ್ಭವಿಸುವುದಿಲ್ಲ.

24. ನನ್ನ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿತ್ತು. ಆದರೆ ಪ್ರಸ್ತುತ ಸದರಿ ಮೊಬೈಲ್ ಸಂಖ್ಯೆ ನಿಷ್ಕ್ರಿಯಗೊಂಡಿದೆ. ನಾನು ಹೇಗೆ ನೋಂದಾಯಿಸಬೇಕು?

ಉತ್ತರ : ಆಧಾರ್ ಸಂಖ್ಯೆಗೆ ಜೋಡಣೆಯಾಗಿದ್ದ ಮೊಬೈಲ್ ಸಂಖ್ಯೆಯು ಪುಸ್ತುತ ನಿಷ್ಕ್ರಿಯಗೊಂಡಿದಲ್ಲಿ ನೀವು ನೋಂದಣಿ ಕೇಂದ್ರಗಳಲ್ಲಿರುವ ಬಯೋಮೆಟ್ರಿಕ್ ಉಪಕರಣಕ್ಕೆ ನಿಮ್ಮ ಬೆರಳಚ್ಚು ನೀಡಿ, ಆಧಾರ್ ದೃಢೀಕರಣ ಮಾಡಬಹುದು.

25. ಯೋಜನೆಯಡಿ ನೊಂದಾಯಿಸಿಕೊಳ್ಳಲು ಗಂಡನ ವಿವರಗಳು ಕಡ್ಡಾಯವಾಗಿದೆ. ವಿಚ್ಛೇದನದ ಪ್ರಕರಣವು ಬಾಕಿ ಉಳಿದಿದ್ದರೆ ಅಥವಾ ನ್ಯಾಯಾಲಯದಲ್ಲಿ ಪ್ರಕ್ರಿಯೆಯಲ್ಲಿದ್ದರೆ ಏನು ಮಾಡಬೇಕು?
ಉತ್ತರ : ಕಾನೂನು ರೀತಿ ವಿಚ್ಚೇದನ ಆಗಿದ್ದಲ್ಲಿ ಗಂಡನ ವಿವರಗಳನ್ನು ಸಲ್ಲಿಸುವ ಅಗತ್ಯವಿಲ್ಲ.

26.ನಾಗರಿಕರು ಆಸ್ತಿ ತೆರಿಗೆಯನ್ನು ಪಾವತಿಸುತ್ತಿದ್ದರೆ ಅವರು ನೊಂದಾಯಿಸಿಕೊಳ್ಳಲು ಅರ್ಹರಾಗುತ್ತಾರೆಯೇ?
ಉತ್ತರ : ಹೌದು, ಅರ್ಹರಿರುತ್ತಾರೆ.

27.ನಾಗರಿಕರು ಸರ್ಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಿದ್ದರೆ, ಈಗ ಅವರು ನಿವೃತ್ತರಾಗಿದ್ದರೆ ಮತ್ತು ಪಿಂಚಣಿ ಪಡೆಯುತ್ತಿರುವವರು ಯೋಜನೆಗೆ ನೊಂದಾಯಿಸಿಕೊಳ್ಳಲು ಅರ್ಹರಾಗುತ್ತಾರೆಯೇ?
ಉತ್ತರ : ಅವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸದಿದ್ದರೆ ಅರ್ಹರಾಗುತ್ತಾರೆ.

28. ಒಂದಕ್ಕಿಂತ ಹೆಚ್ಚು ಕುಟುಂಬದ ಮುಖ್ಯಸ್ಮರಿರುವ ಪಡಿತರ ಚೀಟಿಗಳು ಯೋಜನೆಗೆ ಪರಿಗಣಿಸಲಾಗುತ್ತದೆಯೇ?
ಉತ್ತರ : ನಿಮ್ಮ ಸಮೀಪದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಛೇರಿಯನ್ನು ಸಂಪರ್ಕಿಸುವುದು.

29. ಕುಟುಂಬದ ಮುಖ್ಯಸ್ಮರ ಆಧಾರ್ ಅನ್ನು ನವೀಕರಿಸದ ಮತ್ತು ಆಧಾರ್ ನೊಂದಿಗೆ ಜೋಡಣೆ ಮಾಡಿರದಪಡಿತರ ಚೀಟಿಗಳನ್ನು ಯೋಜನೆಗೆ ಪರಿಗಣಿಸಲಾಗುತ್ತದೆಯೇ?
ಉತ್ತರ : ನಿಮ್ಮ ಸಮೀಪದ ಆಧಾರ್ ಕೇಂದ್ರಕ್ಕೆ ಸಂಪರ್ಕಿಸಿ, ಆಧಾರ್ ಅನ್ನು ನವೀಕರಿಸಿಕೊಳ್ಳುವುದು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಛೇರಿಯನ್ನು ಸಂಪರ್ಕಿಸಿ, ಪಡಿತರ ಚೀಟಿಗೆಜೋಡಣೆ ಮಾಡಿಸಿಕೊಳ್ಳುವುದು.

30. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಮರು ಮಹಿಳೆಯಾಗಿದ್ದು, ಆಧಾರ್ ಕಾರ್ಡ್ ನಲ್ಲಿ ಪುರುಷ/ತೃತೀಯ ಲಿಂಗಿಯಾಗಿರುವ ಪ್ರಕರಣಗಳನ್ನು ಯೋಜನೆಗೆ ಪರಿಗಣಿಸಲಾಗುತ್ತದೆಯೇ?
ಉತ್ತರ : ನಿಮ್ಮ ಸಮೀಪದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಛೇರಿಯನ್ನು ಸಂಪರ್ಕಿಸುವುದು.

31. ತಡೆಹಿಡಿಯಲಾದ ರದ್ದುಗೊಳಿಸಿದ ಪಡಿತರ ಚೀಟಿಗಳನ್ನು
ಪರಿಗಣಿಸಲಾಗುತ್ತದೆಯೇ?
ಉತ್ತರ : ಈ ಯೋಜನೆಗೆ ಅರ್ಹರಿರುವುದಿಲ್ಲ.

32. ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆಯಾಗಿದ್ದು, ಪಡಿತರ ಚೀಟಿಯಲ್ಲಿ ಲಿಂಗ ಪುರುಷ ಎಂದು ನಮೂದಾಗಿದ್ದರೆ ಯೋಜನೆಗೆ ಪರಿಗಣಿಸಲಾಗುತ್ತದೆಯೇ?
ಉತ್ತರ : ನಿಮ್ಮ ಸಮೀಪದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಛೇರಿಯನ್ನು ಸಂಪರ್ಕಿಸಲು ಕೋರಿದೆ.

33. ನನ್ನ ನೋಂದಣಿಗಾಗಿ ನಿಗದಿಪಡಿಸಿದ ದಿನಾಂಕ ಮತ್ತು ಸಮಯವನ್ನು ನಾನು ಎಲ್ಲಿ ತಿಳಿದುಕೊಳ್ಳಬಹುದು?
ಉತ್ತರ : ನಿಮ್ಮ ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ನೋಂದಣಿ ವೇಳಾ ಪಟ್ಟಿಯ ಸಂದೇಶ ಕಳುಹಿಸಲಾಗಿದೆ. ಅಲ್ಲದೇ, ನಿಮ್ಮ ನೋಂದಣಿ ವೇಳಾ ಪಟ್ಟಿಯನ್ನು ನೀವು ಈ ಕೆಳಗಿನ ವಿಧಾನಗಳಲ್ಲಿ ಪರಿಶೀಲಿಸಬಹುದು (ಎ) ನಿಮ್ಮ ವೇಳಾಪಟ್ಟಿಯನ್ನು ತಿಳಿಯಲು 1902 ಗೆ ಕರೆ ಮಾಡಿ ಹಾಗೂ ನೀಡಲಾಗುವ ಸೂಚನಗಳನ್ನು ಅನುಸರಿಸಿ, (ಬಿ) ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು 8147-500-500 ಗೆ SMS ಮಾಡಿ ಮತ್ತು ನಿಗದಿಪಡಿಸಲಾದ ದಿನಾಂಕ ಮತ್ತು ಸಮಯದ ಮಾಹಿತಿ ಪಡೆಯಿರಿ.

(ಸಿ) ಪಡಿತರ ಚೀಟಿ ಸಂಖ್ಯೆಯನ್ನು ಬಳಸಿ, ಸೇವಾಸಿಂಧು ಪೋರ್ಟಲ್ ನಲ್ಲಿ ಹುಡುಕಿ,
ನಿಮ್ಮ ಸಮೀಪದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಛೇರಿಯನ್ನು ಸಂಪರ್ಕಿಸುವುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...