ಬೆಂಗಳೂರು : ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಬಾರದೆ ಇರುವ ಯಜಮಾನಿಯರಿಗೆ ಸಿಹಿಸುದ್ದಿ, ಈ ತಿಂಗಳು ನಿಮ್ಮ ಖಾತೆಗೆ 2,000 ರೂ. ಹಣ ಬರಲಿದೆ.
ಹೌದು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಮೂರು ತಿಂಗಳಾದ್ರೂ ಹಣ ಬಾರದೆ ಇರುವ ಯಜಮಾನಿಯರ ಖಾತೆಗೆ ಈ ತಿಂಗಳಿನಿಂದ ಹಣ ಜಮೆ ಮಾಡುವ ಬಗ್ಗೆ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಇಲಾಖೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತಿದೆ.ಸರ್ಕಾರವು ಈ ತಿಂಗಳು 1.10 ಕೋಟಿ ಜನರಿಗೆ ಹಣವನ್ನು ಬಿಡುಗಡೆ ಮಾಡಿದೆ. ಕೆವೈಸಿ ವಿವರಗಳು ಮತ್ತು ಇ-ಆಡಳಿತದಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ, ಕೆಲವು ವಿಳಂಬಗಳಾಗಿವೆ. ಮೊದಲ ಕಂತಿನಲ್ಲಿ ಹಣ ಪಡೆಯದ ಜನರು ಎರಡು ತಿಂಗಳು ಒಟ್ಟಿಗೆ ಹಣವನ್ನು ಪಡೆಯುತ್ತಿದ್ದಾರೆ. ನಾವು ಎಲ್ಲಾ ಬ್ಯಾಂಕುಗಳು ಮತ್ತು ನಮ್ಮ ಉದ್ಯೋಗಿಗಳೊಂದಿಗೆ ಸಭೆಗಳನ್ನು ನಡೆಸುತ್ತಿದ್ದೇವೆ ಮತ್ತು ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಬಾರದೇ ಇರುವುದಕ್ಕೆ ಯಜಮಾನಿಯರ ಕೆವೈಸಿ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲಾಗಿದೆ. ಸುಮಾರು ಏಳು ಲಕ್ಷ ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ, ಅವುಗಳನ್ನು ಶೀಘ್ರದಲ್ಲೇ ಪರಿಹರಿಸಿ ಈ ತಿಂಗಳು ಅವರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.