ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪೌಷ್ಟಿಕ ವನ ಕೈತೋಟ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.
ಶಾಲೆಗಳಲ್ಲಿ ನಿತ್ಯದ ಬಿಸಿಯೂಟದಲ್ಲಿ ಬಳಸುವ ಸೊಪ್ಪು, ತರಕಾರಿಯನ್ನು ಶಾಲಾ ಅವರಣದಲ್ಲಿ ಕೈತೋಟ ಬೆಳೆಸುವ ಮೂಲಕ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಪೌಷ್ಟಿಕ ವನ ನಿರ್ಮಾಣ ಮಾಡಿ ವಿವಿಧ ತರಕಾರಿ, ಸೊಪ್ಪು, ಹಣ್ಣುಗಳನ್ನು ಬೆಳೆದು ಶಾಲೆಯ ನಿತ್ಯ ಬಿಸಿಯೂಟದಲ್ಲಿ ಬಳಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.
ಸ್ಥಳೀಯ ಸಂಸ್ಥೆಗಳು, ದಾನಿಗಳು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆಗಳ ಸ್ಥಳೀಯ ಕಚೇರಿ ಸಂಪರ್ಕಿಸಿ ಅವರ ನೆರವು, ಮಾರ್ಗದರ್ಶನದೊಂದಿಗೆ ಪೌಷ್ಟಿಕ ವನ ನಿರ್ಮಾಣ ಮಾಡಬೇಕು ಎಂದು ಪಿಎಂ ಪೋಷಣ್ ನಿರ್ದೇಶಕರು ಶಾಲೆಗಳಿಗೆ ಸೂಚನೆ ನೀಡಿದ್ದಾರೆ.