ಬೆಂಗಳೂರು: ಅರ್ಚಕರ ಬಹುದಿನಗಳ ಬೇಡಿಕೆಯಂತೆ ಮುಜರಾಯಿ ಇಲಾಖೆಯ ಸಿ ದರ್ಜೆ ದೇವಸ್ಥಾನದ ಅರ್ಚಕರಿಗೆ ಅನುವಂಶಿಕ ಹಸ್ತಾಂತರಕ್ಕೆ ಸರ್ಕಾರ ಅನುಮತಿ ನೀಡಿದೆ.
ಅರ್ಚಕರು ಮರಣ ಹೊಂದಿದ ಸಂದರ್ಭದಲ್ಲಿ ಮಾತ್ರ ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಹಕ್ಕು ಹಸ್ತಾಂತರಿಸುವ ಅವಕಾಶ ನೀಡಲಾಗಿತ್ತು. ಈಗ ಅನಾರೋಗ್ಯ ಪೀಡಿತ ಅರ್ಚಕರಿಂದ ಮಕ್ಕಳಿಗೆ ಹಕ್ಕು ಹಸ್ತಾಂತರಕ್ಕೆ ಅನುಮತಿ ನೀಡಿ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ಅನಾರೋಗ್ಯಕ್ಕೀಡಾದ ಅರ್ಚಕರು, ವಯಸ್ಸಾದ ಸಂದರ್ಭದಲ್ಲಿ ಅನುವಂಶಿಗಳಿಗೆ ಹಕ್ಕು ಹಸ್ತಾಂತರ ಮಾಡಬಹುದಾಗಿದೆ. ಈ ಸಂಬಂಧ ಷರತ್ತಿನೊಂದಿಗೆ ತಹಶೀಲ್ದಾರ್ ಹಂತದಲ್ಲಿ ಕಾನೂನುಬದ್ಧ ವಾರಸುದಾರರಿಗೆ ಪೂಜೆಯ ಜವಾಬ್ದಾರಿ ವರ್ಗಾಯಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಚಕರು ತೀವ್ರ ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ವೈದ್ಯಕೀಯ ದೃಢೀಕರಣ ಪಡೆಯಬೇಕು ಎಂದು ಹೇಳಲಾಗಿದೆ.