alex Certify ಮೂರೇ ದಿನದಲ್ಲಿ ಹೊಸ ವಿದ್ಯುತ್ ಸಂಪರ್ಕ, ವಾಹನ ಚಾರ್ಜಿಂಗ್ ಗೆ ಪ್ರತ್ಯೇಕ ಮೀಟರ್ ಸೇರಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ವಿದ್ಯುತ್ ಕಾಯ್ದೆಗೆ ತಿದ್ದುಪಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರೇ ದಿನದಲ್ಲಿ ಹೊಸ ವಿದ್ಯುತ್ ಸಂಪರ್ಕ, ವಾಹನ ಚಾರ್ಜಿಂಗ್ ಗೆ ಪ್ರತ್ಯೇಕ ಮೀಟರ್ ಸೇರಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ವಿದ್ಯುತ್ ಕಾಯ್ದೆಗೆ ತಿದ್ದುಪಡಿ

ನವದೆಹಲಿ: ವಿದ್ಯುತ್ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಹೆಚ್ಚುವರಿ ಹಕ್ಕು ಆಯ್ಕೆ ನೀಡಿದ ಕೇಂದ್ರ ಸರ್ಕಾರ ವಿದ್ಯುತ್ ಗ್ರಾಹಕರ ಹಕ್ಕುಗಳ ಕಾಯ್ದೆ -2020 ತಿದ್ದುಪಡಿಗೆ ಅನುಮೋದನೆ ನೀಡಿದೆ.

ಮೂರು ದಿನಗಳಲ್ಲಿ ಹೊಸ ವಿದ್ಯುತ್ ಸಂಪರ್ಕ, ವಾಹನಗಳ ಚಾರ್ಜಿಂಗ್ ಮಾಡಲು ಪ್ರತ್ಯೇಕ ಮೀಟರ್, ಛಾವಣಿ ಸೋಲಾರ್ ಯೋಜನೆಗೆ ತಾಂತ್ರಿಕ ಕಾರ್ಯ ಸಾಧ್ಯತೆ ವರದಿಯಿಂದ ವಿನಾಯಿತಿ ಸೇರಿ ಅನೇಕ ಅನುಕೂಲಗಳನ್ನು ಕಲ್ಪಿಸಲಾಗುವುದು.

ಬಳಕೆದಾರರಿಗೆ ಹೆಚ್ಚುವರಿ ಆಯ್ಕೆ ಹಕ್ಕುಗಳನ್ನು ಕೇಂದ್ರ ಸರ್ಕಾರ ನೀಡಿದೆ. ಇಂಧನ ಸಚಿವ ಆರ್. ಕೆ. ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಪರಿಷ್ಕೃತ ನಿಯಮಗಳ ಪ್ರಕಾರ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಕಾಯಿದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ದೂರುಗಳಿದ್ದಲ್ಲಿ ಶೀಘ್ರವಾಗಿ ಹೊಸ ಮೀಟರ್ ಅಳವಡಿಸಲಾಗುವುದು. ಬಹುಮಹಡಿ ಫ್ಲಾಟ್‌ಗಳಲ್ಲಿ ಹೆಚ್ಚು ಆಯ್ಕೆಗಳ ಸೌಲಭ್ಯ ಇರಲಿದೆ. ಛಾವಣಿ ಸೌರ ವಿದ್ಯುತ್ ಯೋಜನೆ ನಿಯಮ ಸರಳಗೊಳಿಸಲಾಗಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...