ನಂಬಿದ್ರು ನಂಬಿ ಬಿಟ್ರೆ ಬಿಡಿ: ದಿನಕ್ಕೆ 1 ಗಂಟೆ ಕೆಲಸ ಮಾಡಿ ವರ್ಷಕ್ಕೆ 1.20 ಕೋಟಿ ವೇತನ ಪಡೆಯುತ್ತಾನೆ ಈ ಟೆಕ್ಕಿ….!

Indiatimes

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಅತ್ಯಧಿಕ ವೇತನ ಸಿಗುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಆದರೆ ಇದಕ್ಕಾಗಿ ಅಷ್ಟೇ ಕಷ್ಟ ಪಡಬೇಕಾಗಿರುತ್ತದೆ. ಆದರೆ ಇಲ್ಲೊಬ್ಬ ಟೆಕ್ಕಿ ದಿನಕ್ಕೆ ಕೇವಲ ಒಂದು ಗಂಟೆಗಳ ಕಾಲ ಕೆಲಸ ಮಾಡಿ ವಾರ್ಷಿಕ 1.20 ಕೋಟಿ ರೂಪಾಯಿಗಳ ವೇತನವನ್ನು ಗಳಿಸುತ್ತಾನೆ.

ಹೌದು, ಇದು ಸತ್ಯ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ‘ಗೂಗಲ್’ ಕಂಪನಿಯಲ್ಲಿ ಕೆಲಸ ಮಾಡುವ ಹೆಸರು ಬಹಿರಂಗಪಡಿಸಲು ಇಚ್ಚಿಸದ 20 ವರ್ಷದ ಈ ಟೆಕ್ಕಿ ಸ್ವತಃ ತಾನೆ ಈ ವಿಚಾರವನ್ನು ನ್ಯೂಯಾರ್ಕ್ ಮೂಲದ ವ್ಯಾಪಾರ ನಿಯತಕಾಲಿಕೆ ‘ಫಾರ್ಚೂನ್’ ಬಳಿ ಹೇಳಿಕೊಂಡಿದ್ದಾನೆ.

ಗೂಗಲ್ ಟೂಲ್ಸ್ ಗಳಿಗೆ ಕೋಡ್ ಬರೆಯುವ ಕಾರ್ಯದಲ್ಲಿ ಈತ ತೊಡಗಿಕೊಂಡಿದ್ದು, ಇದಕ್ಕಾಗಿ ದಿನದಲ್ಲಿ ಒಂದು ಗಂಟೆ ಮಾತ್ರ ಬಳಸಿಕೊಳ್ಳುತ್ತಾನಂತೆ. ಉಳಿದ ಅವಧಿಯನ್ನು ತನ್ನ ಸ್ಟಾರ್ಟ್ ಅಪ್ ಕೆಲಸಕ್ಕೆ ಈತ ವಿನಿಯೋಗಿಸುತ್ತಿದ್ದು, ಕಾರ್ಪೊರೇಟ್ ಜಗತ್ತಿನಲ್ಲಿ ಕಷ್ಟಪಟ್ಟು ಕೆಲಸ ಮಾಡುವುದು ಅರ್ಥಹೀನ ಎಂದು ಅಭಿಪ್ರಾಯಪಟ್ಟಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read