ಬೆಂಗಳೂರು : ರಾಜ್ಯ ಸರ್ಕಾರವು ಮತ್ತೊಂದು ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಮಧುಮೇಹ ಮತ್ತು ಅಧಿಕರಕ್ತದೊತ್ತ ಸಮಸ್ಯೆ ಇರುವವರ ಮನೆ ಬಾಗಿಲಿಗೆ ಔಷಧಗಳನ್ನು ವಿತರಿಸಲು ಮುಂದಾಗಿದೆ.
ಹೌದು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಿಗೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಒಳಗೊಂಡ ಔಷಧ ಪೆಟ್ಟಿಗೆ ವಿತರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ರಾಮನಗರ, ತುಮಕೂರು, ಬೆಳಗಾವಿ, ಗದಗ, ಬಳ್ಳಾರಿ, ಯಾದಗಿರಿ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ಈ ವರ್ಷ ವಿತರಿಸಲಾಗುತ್ತದೆ. ಉಳಿದ ಜಿಲ್ಲೆಗಳಿಗೆ ಮುಂದಿನ ವರ್ಷದಲ್ಲಿ ವಿಸ್ತರಿಸಲಾಗುತ್ತದೆ.