
ಬೆಂಗಳೂರು : ರಾಜ್ಯದ ರೈತ ಸಮುದಾಯದಕ್ಕೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಗ್ರಾಮದ ಎಲ್ಲಾ ಆಸ್ತಿಗಳ ಭೂ ಮಾಪನ ಪೂರ್ಣಗೊಳಿಸಿ ಪೋಡಿ ಮಾಡಿಕೊಡಲು 2 ತಿಂಗಳಲ್ಲಿ ಆಕ್ಷನ್ ಪ್ಲಾನ್ ಸಿದ್ದಪಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ರೈತರ ಸಮಸ್ಯೆ ನೀಗಿಸುವ ಸಲುವಾಗಿ 1800 ಜನ ಲೈಸೆನ್ಸ್ಡ್ ಭೂ ಮಾಪಕರನ್ನು ನೇಮಕಗೊಳಿಸಿ ತರಬೇತಿ ನೀಡಲಾಗುತ್ತಿದೆ. 364 ಜನ ಸರ್ಕಾರಿ ಭೂ ಮಾಪಕರು ಹಾಗೂ 27 ಎಡಿಎಲ್ಆರ್ ಗಳನ್ನು ನೇಮಕ ಮಾಡಲಾಗುವುದು. ಪ್ರತಿಯೊಂದು ಜಿಲ್ಲೆಗಳಿಗೂ ಆದ್ಯತೆಯ ಮೇರೆಗೆ ಭೂ ಮಾಪಕರನ್ನು ನಿಯೋಜಿಸಲಾಗುವುದು ಎಂದಿದ್ದಾರೆ.
ಪೋಡಿ ಅಭಿಯಾನ ಮುಂದುವರೆದಿದ್ದರೆ ರೈತರಿಗೆ ಸಮಸ್ಯೆಯೇ ಇರುತ್ತಿರಲಿಲ್ಲ, ಈಗ ನಾವೇ ಗ್ರಾಮಗಳಿಗೆ ತೆರಳಿ ಮತ್ತೆ ಪೋಡಿ ಮುಕ್ತ ಅಭಿಯಾನ ಆರಂಭಿಸಲಿದ್ದೇವೆ. ಪೋಡಿ ಕಾರಣಕ್ಕೆ ಸಂಕಷ್ಟಕ್ಕೀಡಾಗಿರುವ ರೈತರ ಸಮಸ್ಯೆಗಳನ್ನು ನೀಗಿಸುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳಿಗೂ ಗುರಿ ನೀಡಲಾಗಿದೆ. ಶೀಘ್ರದಲ್ಲಿ ನಮ್ಮ ಗುರಿ ಸಾಧಿಸಲಾಗುವುದು ಎಂದು ತಿಳಿಸಿದ್ದಾರೆ