ಬೆಂಗಳೂರು : ಅನ್ನಭಾಗ್ಯ ಯೋಜನೆಯ ಹಣ ಬಾರದೆ ಇರುವ ಫಲಾನುಭವಿಗಳಿಗೆ ಆಹಾರ ಇಲಾಖೆಯು ಸಿಹಿಸುದ್ದಿಯೊಂದನ್ನು ನೀಡಿದ್ದು, ಕುಟುಂಬದ ಯಜಮಾನನ ಅನುಪಸ್ಥಿತಿಯಲ್ಲಿ 2ನೇ ಯಜಮಾನನ ಖಾತೆಗೆ ಹಣ ಜಮಾ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹೆಚ್ಚುವರಿ 5 ಕೆಜೆ ಅಕ್ಕಿ ಬದಲಾಗಿ ಹಣವನ್ನು ಕುಟುಂಬದ ಯಜಮಾನರ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಆದರೆ, ಕೆಲವು ತಾಂತ್ರಿಕ ಕಾರಣದಿಂದಾಗಿ ಸುಮಾರು 9 ಲಕ್ಷ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ.
ರಾಜ್ಯದ 9 ಲಕ್ಷ ಜನರಿಗೆ ಇದುವರೆಗೆ ಅನ್ನಭಾಗ್ಯದ ದುಡ್ಡು ಜಮೆಯಾಗಿಲ್ಲ. ಈ ಪಲಾನುಭವಿಗಳ ಪಡಿತರ ಚೀಟಿಯಲಿ ಮನೆಯ ಹಿರಿಯ ಸದಸ್ಯರ ಆಕೌಂಟ್ ನಿಷ್ಕ್ರಿಯ, ಆಧಾರ್ ಸೀಡಿಂಗ್ ಮತ್ತು ಕೆವೈಸಿ ಸಮಸ್ಯೆ ಸರಿಪಡಿಸಲಾಗಿದ್ದು, ಈ ತಿಂಗಳಿಂದಲೇ ಬಿಪಿಎಲ್ ಪಡಿತರದಾರರ ತಾಂತ್ರಿಕ ದೋಷವಿರುವ ರೇಷನ್ ಕಾರ್ಡ್ 2ನೇ ಯಜಮಾನರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.