ಹಸಿ ಶುಂಠಿಯನ್ನು ಹೆಚ್ಚಿನವರು ಅಡುಗೆ ತಯಾರಿಸುವಾಗ ಬಳಸುತ್ತಾರೆ. ಇದನ್ನು ಸೇವಿಸುವುದರಿಂದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಸಮೀಪವೂ ಸುಳಿಯುವುದಿಲ್ಲ, ಹಾಗೆ ಸೌಂದರ್ಯದಲ್ಲೂ ಶುಂಠಿಯ ಕೊಡುಗೆ ಅಮೂಲ್ಯ.
ತಲೆಯ ಹೊಟ್ಟಿನ ಸಮಸ್ಯೆ ನಿವಾರಣೆಗೆ ಹಸಿ ಶುಂಠಿಯನ್ನು ಬಳಸಬಹುದು. ತಲೆ ವಿಪರೀತ ತುರಿಸುತ್ತಿದ್ದರೆ ಅದಕ್ಕೂ ಶುಂಠಿಯಲ್ಲಿ ಮದ್ದಿದೆ. ಇದನ್ನು ಬಳಸುವುದು ಹೇಗೆನ್ನುತ್ತೀರಾ? ಶುಂಠಿಯನ್ನು ಸ್ವಚ್ಛವಾಗಿ ತೊಳೆದು ಸಣ್ಣದಾಗಿ ಕತ್ತರಿಸಿಡಿ. ಅದನ್ನು ಒಂದು ಲೋಟ ನೀರಿಗೆ ಹಾಕಿ ಕಾಲು ಲೋಟಕ್ಕಾಗುವಷ್ಟು ಕುದಿಸಿ.
ಇದನ್ನು ಸೋಸಿ ಸಣ್ಣ ಬಾಟಲಿಯಲ್ಲಿ ಸಂಗ್ರಹಿಸಿಡಿ. ಸ್ನಾನಕ್ಕೆ ಮುನ್ನ ಇದನ್ನು ನೆತ್ತಿಗೆ ಸಿಂಪಡಿಸಿ ಅಥವಾ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ತಲೆಗೆ ಹಚ್ಚಿಕೊಳ್ಳುವಾಗ ಇದನ್ನು ಬೆರೆಸಿ. ಇದನ್ನು ಹಚ್ಚಿಕೊಂಡ ಅರ್ಧ ಗಂಟೆ ಬಳಿಕ ಸ್ನಾನ ಮಾಡಿ.
ವಿಪರೀತ ತುರಿಕೆ ಇದ್ದರೆ ವಾರಕ್ಕೊಮ್ಮೆ ಈ ಔಷಧವನ್ನು ಬಳಸಬಹುದು. ನೆತ್ತಿಯಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ವಿಪರೀತ ಹೆಚ್ಚಿದ್ದರೆ ಶುಂಠಿಯ ನೀರನ್ನು ತಲೆಗೆ ಹಾಕಿ ಕೂದಲನ್ನು ಒದ್ದೆ ಮಾಡಿಕೊಳ್ಳಬಹುದು. ಇದಾದ ಅರ್ಧ ಗಂಟೆ ಬಳಿಕ ತಲೆಗೆ ಸ್ನಾನ ಮಾಡಿದರೆ ಸಾಕು.