ಬಾಲಿಯಲ್ಲಿನ ದೇವಾಲಯವೊಂದರಲ್ಲಿ ಜರ್ಮನಿ ಮೂಲದ ಪ್ರವಾಸಿಯೊಬ್ಬರು ತಮ್ಮ ವಸ್ತ್ರವನ್ನು ವಿವಸ್ತ್ರಗೊಳಿಸಿ ಓಡಾಡಿರುವ ಘಟನೆ ನಡೆದಿದೆ. ಕೂಡಲೇ ಮಹಿಳೆಯನ್ನು ಬಂಧಿಸಿದ ಇಂಡೋನೇಷ್ಯಾದ ಅಧಿಕಾರಿಗಳು ಮಾನಸಿಕ ಆರೋಗ್ಯ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ.
ಉಬುದ್‌ನಲ್ಲಿರುವ ಸರಸ್ವತಿ ಹಿಂದೂ ದೇವಾಲಯದಲ್ಲಿ ಮಹಿಳೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾಳೆ. 28 ವರ್ಷದ ದರ್ಜಾ ಟುಸ್ಚಿನ್ಸ್ಕಿ ಎಂಬಾಕೆ ದೇಗುಲದ ಒಳಗಾಂಣದ ಪವಿತ್ರ ಸ್ಥಳಕ್ಕೆ ಪ್ರವೇಶಿಸಲು ಯತ್ನಿಸಿದಳು. ಭದ್ರತಾ ಸಿಬ್ಬಂದಿ ಆಕೆಯನ್ನು ಒಳಗೆ ಹೋಗದಂತೆ ತಡೆದಿದ್ದಾರೆ. ಇದರಿಂದ ಆಕೆ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾಳೆ. ನಂತರ ಬಲವಂತವಾಗಿ ಹೊರಾಂಗಣಕ್ಕೆ ಬಂದ ಆಕೆ, ಅಲ್ಲಿ ನೃತ್ಯಗಾರರ ಮುಂದೆ ಬೆತ್ತಲೆಯಾಗಿ ನಿಂತಿದ್ದಾಳೆ.
ಇನ್ನು ದೇವಾಲಯವು ಪವಿತ್ರ ಸ್ಥಳವನ್ನು ಶುದ್ಧೀಕರಿಸಲು ಯೋಜಿಸಿದೆ. ಜರ್ಮನಿಗೆ ಹಿಂತಿರುಗಲು ವಿಮಾನವನ್ನು ಹತ್ತಲು ನಿರಾಕರಿಸಿದ ನಂತರ, ತುಶಿನ್ಸ್ಕಿಯನ್ನು ಬಾಂಗ್ಲಿ ಪಟ್ಟಣದ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟೇ ಅಲ್ಲ ಮಹಿಳೆಯು ಹೋಟೆಲ್ ಬಿಲ್ ಗಳನ್ನು ಪಾವತಿಸಿಲ್ಲ ಎಂಬ ಆರೋಪವೂ ಆಕೆಯ ಮೇಲಿದೆ. ಬಾಲಿಯಲ್ಲಿ ಉಳಿಯಲು ಹಣವಿಲ್ಲದ ಕಾರಣ ವಿದೇಶಿ ಮಹಿಳೆ ಖಿನ್ನತೆಗೆ ಒಳಗಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.