ಗೋವಾದಲ್ಲಿ ಡ್ರಗ್ಸ್ ಜಾಲ ಪತ್ತೆ ಹಚ್ಚಿದ ಎನ್ ಸಿ ಬಿ ಇಬ್ಬರು ರಷ್ಯನ್ ಪ್ರಜೆಗಳು ಸೇರಿದಂತೆ ಓರ್ವ ಭಾರತೀಯನನ್ನು ಬಂಧಿಸಿದೆ. ಅಚ್ಚರಿಯ ಅಂಶವೆಂದರೆ ಬಂಧಿತ ರಷ್ಯನ್ ಪ್ರಜೆಗಳಲ್ಲಿ ಓರ್ವ ಒಲಿಂಪಿಕ್ ಪದಕ ವಿಜೇತನಾಗಿದ್ರೆ ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ.
ಅಂತರರಾಷ್ಟ್ರೀಯ ಡ್ರಗ್ ಕಾರ್ಟೆಲ್ ಅನ್ನು ನಡೆಸುತ್ತಿದ್ದ ಅವರನ್ನು ಎರಡು ವಾರಗಳ ಕಾಲ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
1980 ರ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಎಸ್ ವರ್ಗನೋವಾ, ರಷ್ಯಾದ ಡ್ರಗ್ ಕಾರ್ಟೆಲ್‌ನ ಮುಂಚೂಣಿಯಲ್ಲಿದ್ದ. ಆತ ವಿದೇಶಿ ಪ್ರಜೆಗಳಿಗೆ ಡ್ರಗ್ಸ್ ಪೂರೈಕೆಯಲ್ಲಿ ತೊಡಗಿದ್ದ. ಸುಳಿವಿನ ಆಧಾರದ ಮೇಲೆ ಎನ್‌ಸಿಬಿ ತನಿಖೆಯನ್ನು ಪ್ರಾರಂಭಿಸಿ ರಷ್ಯಾದ ಪ್ರಜೆ ವರ್ಗನೋವಾ, ಸ್ಥಳೀಯ ನಿವಾಸಿ ಸೇರಿದಂತೆ ಇತರ ಇಬ್ಬರೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಎಂಬುದು ಕಂಡುಬಂದಿದೆ.
ಸ್ಥಳೀಯ ನಿವಾಸಿ ಆಕಾಶ್ ದೊಡ್ಡ ಡ್ರಗ್ಸ್ ನೆಟ್‌ವರ್ಕ್‌ನ ಭಾಗವಾಗಿದ್ದು ಡ್ರಗ್ ಕಾರ್ಟೆಲ್‌ನ ಕಿಂಗ್‌ಪಿನ್ ರಷ್ಯಾದ ಇನ್ನೊಬ್ಬನ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದ ಎಂದು ಎನ್‌ಸಿಬಿ ಪತ್ತೆಹಚ್ಚಿದೆ.
ವ್ಯಾಪಕ ಗುಪ್ತಚರ-ಆಧಾರಿತ ಕಾರ್ಯಾಚರಣೆಗಳ ನಂತರ ಮಾಜಿ ಪೊಲೀಸ್ ಅಧಿಕಾರಿ ಆಂಡ್ರೆ ಎಂಬ ರಷ್ಯಾದ ಪ್ರಜೆಯನ್ನು ಬಂಧಿಸಲಾಯಿತು. ಅವನಿಂದ 20 LSD ಬ್ಲಾಟ್ ಮತ್ತು ಅವನ ಮನೆಯಿಂದ ಹೈಡ್ರೋಪೋನಿಕ್ ವೀಡ್ ಸಸ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂವರನ್ನು ಬಂಧಿಸಲಾಗಿದ್ದು, ಅವರಿಂದ ಕರೆನ್ಸಿ ನೋಟುಗಳು, ನಕಲಿ ದಾಖಲೆಗಳು, ಐಡಿಗಳು ಮತ್ತು ಹೈಡ್ರೋಪೋನಿಕ್ ವೀಡ್ ಬೆಳೆಯಲು ಬೇಕಾದ ವಸ್ತುಗಳು ಸೇರಿದಂತೆ ಹಲವು ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.